ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನೆಟ್ ನೋಟ

Lingaraj Badiger
Updated On : 22 Apr 2013, 4:35 am

ಇರುವುದನ್ನೇ ಹೊಸದಾಗಿ ಪರಿಚಯಿಸಿಕೊಳ್ಳುವುದು ಫ್ಯಾಷನ್ ಮಂತ್ರ. ಹಳೆಯದೆಲ್ಲಾ ಇಂದಿನ ಮಂದಿಯ ಅಭಿರುಚಿಗೆ ತಕ್ಕಂತೆ ಹೊಸ ರೂಪ ಪಡೆಯುತ್ತಿದೆ. ಅದರಲ್ಲೂ ಮಾನಿನಿಯರ ಡ್ರೆಸ್‌ಕೋಡ್.
ನೆಟ್ಟೆಡ್ ಸ್ಯಾರಿ, ನೆಟ್ಟೆಡ್ ಚೂಡಿದಾರ್, ದುಪಟ್ಟಾ, ಟಾಪ್ಸ್ ಆಯ್ತು. ಈಗ ನೆಟ್ಟೆಡ್ ಕೋಟ್‌ಗಳ ಸರದಿ. ಬೇಸಿಗೆಗೆ ಹೇಳಿ ಮಾಡಿಸಿದಂತಿರುವ ಇವುಗಳು, ಸ್ವಲ್ಪ ಚೇಂಜ್ ಬಯಸುವವರಿಗೆ ಹಾಟ್ ಫೇವರಿಟ್.
ಸ್ಲಿಪ್ಸ್, ಸ್ಲೀವ್‌ಲೆಸ್ ಟಿ-ಶರ್ಟ್‌ಗಳ ಮೇಲೆ ಲಾಂಗ್ ಲೆಂಥಿಂಗ್ ಕೋಟ್‌ಗಳನ್ನು ತೊಡುವ ಬದಲು ಇವುಗಳನ್ನು ತೊಟ್ಟರೆ ಬಿರು ಬೇಸಿಗೆಗೆ ತಂಪಾದ ಅನುಭೂತಿ. ವೇಯ್ಟ್‌ಲೆಸ್ ಆಗಿರುವ ಇವುಗಳು ಶಾರ್ಟ್ಸ್ ಮತ್ತು ದುಪ್ಪಟ್ಟಾಗಳಂತೆ ರಕ್ಷಣೆ ಒದಗಿಸುತ್ತೆ. ಅಲ್ಲದೆ ಹಾಟ್ ಆಂಡ್ ಸ್ಪೈಸಿಯಾಗಿ ಕಾಣಬಯಸುವ ಟ್ರೆಂಡಿ ಗರ್ಲ್ಸ್ ಇಷ್ಟದ ಲಿಸ್ಟ್‌ನಲ್ಲಿ ನೆಟ್ಟೆಡ್ ಕೋಟ್ಸ್ ಈಗಾಗಲೇ ಸ್ಥಾನ ಪಡೆದಿವೆ.
ಕಲೆಕ್ಷನ್ಸ್ ಏನೆಲ್ಲಾ ಇದೆ?
ಇವುಗಳಲ್ಲಿ ಪಾರ್ಟಿವೇರ್, ಡೈಲಿವೇರ್, ಸ್ಲೀವ್‌ಲೆಸ್, ಹಾಫ್ ಸ್ಲೀವ್, ಫುಲ್ ಲೆಂಥಿ, ಶಾರ್ಟ್‌ನೆಟ್, ಫ್ಲವರಿ, ಸೀಜರಿ ಇವೆ. ನೆಟ್ ಡಿಸೈನ್‌ಗಳಲ್ಲೂ ಆನಿಮಲ್ಸ್, ಬಟರ್‌ಫ್ಲೈ, ಶಾರ್ಟ್ ಡಾಟ್ಸ್ ಮುಂತಾದ ಬಗೆಯಲ್ಲಿ ಟಾಪ್ ಟು ಬಾಟಮ್ ಹೊಂದುವ ಚ್ಯೂಸಿ ಸೆಲೆಕ್ಷನ್ಸ್ ಲಭ್ಯ.
ಮೈಯ ಸ್ವಭಾವ, ರೂಪ, ವಯ್ಯಾರಕ್ಕೆ ತಕ್ಕಂತೆ ಕಾಟನ್, ವುಲ್ಲನ್ ಮಿಶ್ರಿತ ಬೇಸಿಗೆ ಸೆಲೆಕ್ಷನ್‌ಗಳು ಫ್ಯಾಷನ್ ಮಾರುಕಟ್ಟೆ ಪ್ರವೇಶಿಸಿವೆ. ಕಬೋರ್ಡ್ ಲಿಸ್ಟ್‌ಗೆ ಇಡಲು ಮಾತ್ರವಲ್ಲ ಒಮ್ಮೆ ಟ್ರೈ ಮಾಡಿ ನೋಡಲು ಅಡ್ಡಿಯಿಲ್ಲ ಎಂಬಂತೆ ಯುವತಿಯರ ಯೋಚನೆಯನ್ನೇ ಬದಲಿಸಿವೆ. ಕೂತಲ್ಲೇ ಆಯ್ಕೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ, ನೆಟ್ಟೆಡ್ ಕೋಟ್ ಸ್ಲಿಮ್ ಫಿಟ್ ಇರುವ, ಕೊಂಚ ದುಂಡಗಿರುವ ಮಂದಿಗೂ ಸೂಪರ್ಬ್ ಹೊಂದಿಕೆ. ಇದನ್ನು ಧರಿಸಿದವರು ಹಾಟ್ ಅಂಡ್ ಸ್ಪೈಸಿಯಾಗಿ ಕಂಡುಬಂದು 'ಹವಾ' ಎಬ್ಬಿಸುವಲ್ಲಿ ನೋ ಡೌಟ್.

-ಭಾಗ್ಯ ಗೌಡ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments