ದಾಳಿಂಬೆ (ಮಾಹಿತಿ.ಕಾಂ)
ದಾಳಿಂಬೆ ಲಿತ್ರೇಸಿ ಕುಟುಂಬಕ್ಕೆ ಸೇರಿದ್ದು. ಈ ಹಣ್ಣಿನ ಮೂಲ ಪರ್ಷಿಯಾ ದೇಶ.
ದಾಳಿಂಬೆ ಹಣ್ಣಿನ ಸಿಪ್ಪೆ, ತೊಗಟೆ, ಬೀಜ ಹಾಗೂ ಎಲೆಗಳು ಔಷಧಗಳಲ್ಲಿ ಬಳಕೆಯಾಗುತ್ತಿದೆ.
ಕೆಂಪು ದಾಳಿಂಬೆ ಹಣ್ಣು ಆರೋಗ್ಯಕ್ಕೆ, ಔಷಧಕ್ಕೆ ಉತ್ತಮ ವಾದದ್ದು. ಇದರಲ್ಲಿ ವಿಟಮಿನ ಸಿ, ಫಾಸ್ಫೆರಸ್ ಅಧಿಕವಾಗಿದೆ.
ನೆನಪಿನ ಶಕ್ತಿಯನ್ನು ವೃದ್ಧಿಸುವ ದಾಳಿಂಬೆ, ಎಲ್ಲ ಹಣ್ಣಿಗಿಂತ ಹೆಚ್ಚು ಉಪಯುಕ್ತವೆಂದು ಇತ್ತೀಚಿನ ವರದಿ ತಿಳಿಸಿದೆ.