ಮಗುವಾದರೆ ಸರಿ ಹೋಗುತ್ತಾ? (ಹಾರ್ಡ್‌ವರ್ಡ್)
ಮದುವೆಯಾಗಿ ಆರು ತಿಂಗಳಾಗಿದೆ. ನಮ್ಮಿಬ್ಬರಲ್ಲಿ ಹೊಂದಾಣಿಕೆಯೇ ಇಲ್ಲ. ಮಗುವಾದರೆ ಸರಿ ಹೋಗಬಹುದಾ?
- ಧನಲಕ್ಷ್ಮೀ, ಕಲಘಟಗಿ
ಹೊಂದಾಣಿಕೆ ಎಂಬುದು ನಿಮ್ಮ ಮನಸ್ಸಿನಲ್ಲಿ ಹುಟ್ಟುವಂಥದ್ದು. ನೀವು ಅಂತಲೇ ಅಲ್ಲ, ಬಹಳಷ್ಟು ಜನರ ತಪ್ಪು ಕಲ್ಪನೆ ಇದೇ. ಮಗುವಾದರೆ ದಂಪತಿಯ ಮನಸ್ತಾಪ ಕಡಿಮೆ ಆಗುತ್ತದೆ ಎನ್ನುವುದು ಸುಳ್ಳು. ಮಗುವಾದ ಬಳಿಕ ಇಬ್ಬರೂ ಪರಸ್ಪರರ ವಿರುದ್ಧ ಮಗುವನ್ನು ಎತ್ತಿ ಕಟ್ಟಲು ಪ್ರಯತ್ನಿಸಬಹುದು. ಮೂಲತಃ ನಿಮ್ಮಲ್ಲಿ ಸಮಸ್ಯೆ ಇರುವುದು ಮಾನಸಿಕ ಹೊಂದಾಣಿಕೆ ಕೊರತೆ. ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿ. ಇಬ್ಬರೂ ಒಮ್ಮೆ ನುರಿತ ಕೌನ್ಸೆಲರ್ ಅವರನ್ನು ಭೇಟಿ ಮಾಡಿದರೆ ಉತ್ತಮ.
ಡಾ. ಸ್ಯಾಟಲೈಟ್
anekaby2@gmail.com
ನಿಮ್ಮ ಏನೇ ಪ್ರಶ್ನೆಗೆ ಸ್ಯಾಟಲೈಟ್ ಉತ್ತರಿಸುತ್ತದೆ. ಇಲ್ಲಿ ಎಲ್ಲವೂ ನೇರಾನೇರ. ನಿಮ್ಮ ಸಮಸ್ಯೆಗಳನ್ನು ನಮಗೆ ಈಮೇಲ್ ಮಾಡಿ...