ಡಾ.ಕಬ್ಬಿನಾಲೆ ವಸಂತ ಭಾರದ್ವಾಜ, ಅಷ್ಟಾವಧಾನಿ
1. 'ಅಷ್ಟಾವಧಾನಿ' ಆಗಿರುವ ನಿಮಗೆ ಕಷ್ಟ ಎನಿಸುವುದು ಏನು?
-ಚೆಲುವಿಲ್ಲದ ಅಭಿಮಾನಿಗಳ ಹೆಸರನ್ನೂ ನೆನಪಿಟ್ಟುಕೊಳ್ಳುವುದು.
2. 'ಅವಧಾನ'ಕ್ಕೂ, 'ಸಮಾಧಾನ'ಕ್ಕೂ ಇರುವ 'ಪ್ರಧಾನ' ವ್ಯತ್ಯಾಸ?
-'ಸಮಾಧಾನ' ಕಪಿಗಳಿಗೂ ಇರುತ್ತದೆ. 'ಅವಧಾನ' ಕವಿಗಳಿಂದ ಮಾತ್ರ ಸಾಧ್ಯ.
3. 'ಅವಧಾನಿ'ಯಾಗಿರುವ ನೀವು 'ಪ್ರಧಾನಿ'ಯಾದರೆ ಮೊದಲು ಮಾಡುವ ಬಹುಮುಖ್ಯ ಕೆಲಸ ಏನು?
-ಜತೆಯಲ್ಲಿ ಇರುವ 'ಅಪ್ರಸ್ತುತ ಪ್ರಸಂಗಿ'ಗಳನ್ನು ಒದ್ದು ಓಡಿಸುವುದು.
-ರವಿಕಾಂತ ಕುಂದಾಪುರ
ravikantha27@gmail.com