ಮಾಂಟೆ ಪಣೇಸರ್ ಜನುಮ ದಿನ
- 1982.
- ಭಾರತೀಯ ಸಂಜಾತ ಇಂಗ್ಲೆಂಡ್ ಕ್ರಿಕೆಟಿಗ.
- ಎಡಗೈ ಸ್ಪಿನ್ನರ್. ಭಾರತದ ವಿರುದ್ಧವೇ ಟೆಸ್ಟ್ಗೆ ಪದಾರ್ಪಣೆ.
- 47 ಟೆಸ್ಟ್ಗಳಿಂದ 161, 26 ಏಕದಿನ ಪಂದ್ಯಗಳಿಂದ 24 ವಿಕೆಟ್ ಸಾಧನೆ.
ಇಂದ್ರಾ ದೇವಿ ಪುಣ್ಯತಿಥಿ
- 1899- 2002.
- ಯೋಗ ಗುರು, ಹಿಂದಿ ಪೋಷಕ ನಟಿ.
- ರಷ್ಯ ಸಂಜಾತೆಯಾದರೂ ಎಳವೆಯಿಂದಲೇ ಭಾರತೀಯ ಸಂಸ್ಕೃತಿಯತ್ತ ಒಲವು.
- ಟ್ಯಾಗೋರ್ ಮತ್ತು ಯೋಗಗುರು ಯೋಗಿ ರಾಮಚರಕ ಅವರಿಂದ ಪ್ರಭಾವಿತೆ.
ದಿನಚರಿತೆ
- 1945- ಸ್ಯಾನ್ಫ್ರಾನ್ಸಿಸ್ಕೊದಲ್ಲಿ ವಿಶ್ವಸಂಸ್ಥೆ ಪ್ರಥಮ ಅಧಿವೇಶನ.
- 1953- ಕೇಂಬ್ರಿಡ್ಜ್ ವಿ.ವಿ ವಿಜ್ಞಾನಿಗಳಾದ ಜೆ.ಡಿ. ವ್ಯಾಟ್ಸನ್ ಮತ್ತು ಫ್ರಾನ್ಸಿಸ್ ಕ್ರೀಕ್ ಅವರಿಂದ 'ಡಿಎನ್ಎ-ದಿ ಸೀಕ್ರೆಟ್ ಆಫ್ ಲೈಫ್' ಲೇಖನ ಪ್ರಕಟ.
ಟ್ವೀಟ್ಸ್ಟಾಲ್
ಅತ್ಯಾಚಾರಕ್ಕೆ ಒಳಗಾದವರಿಗೆ 'ನಿರ್ಭಯಾ'ದಂಥ ಹೆಸರು ಕೊಡುವುದನ್ನು ನಿಲ್ಲಿಸಿ. ಮೊದಲು 'ನಿರ್ದಯಿ'ಗಳನ್ನು ಶಿಕ್ಷಿಸಿ.
-ಸೇವ್ ಎ ಚೈಲ್ಡ್ ಆಂದೋಲನ