ಹೇಗೆ ಪ್ರಪೋಸ್ ಮಾಡಲಿ?
ನಾನು ಒಬ್ಬಳನ್ನು ಪ್ರೀತಿಸುತ್ತಿದ್ದೇನೆ, ಆದರೆ ಅವಳಲ್ಲಿ ಹೇಳಿಲ್ಲ. ಆಕೆ ನನ್ನ ಗೆಳತಿ. ಅವಳಿಗೆ ಹೇಗೆ ಪ್ರಪೋಸ್ ಮಾಡಲಿ?
-ವೆಂಕಟೇಶ್, ಬೆಂಗಳೂರು
ಸ್ನೇಹಿತ ಎನ್ನುವ ಅಭಿಮಾನದಿಂದ ಆಕೆ ನಿಮ್ಮೊಂದಿಗೆ ಕೊಂಚ ಸಲುಗೆಯಿಂದ ವರ್ತಿಸಿದ್ದನ್ನೇ ನೀವು 'ಪ್ರೀತಿ' ಎಂದು ಭಾವಿಸಿಕೊಂಡಿದ್ದೀರೋ ಹೇಗೆ? ಅದನ್ನು ಖಚಿತಪಡಿಸಿಕೊಳ್ಳಲು ಮೊದಲು ಅವಳ ಮನಸ್ಸಿನಲ್ಲೇನಿದೆ ಎನ್ನುವುದನ್ನು ಜಾಣತನದಿಂದ ತಿಳಿದುಕೊಳ್ಳಿ. ಆಕೆ ಯಾರನ್ನೂ ಪ್ರೀತಿಸುತ್ತಿಲ್ಲ ಎಂದರೆ ನೇರವಾಗಿ ನಿಮ್ಮ ಭಾವನೆಗಳನ್ನು ಹೇಳಿಕೊಂಡುಬಿಡಿ. ಫಲಿತಾಂಶ ಏನೇ ಇದ್ದರೂ ಸಕಾರಾತ್ಮಕವಾಗಿ ಸ್ವೀಕರಿಸಲು ಮಾನಸಿಕವಾಗಿ ಸಿದ್ಧವಾಗಿರಿ.
ಡಾ. ಸ್ಯಾಟಲೈಟ್
anekaby2@gmail.com