ಬಿ ಮತ್ತು ಸಿ ವರದಿ
ಆರೋಪಿ ವಿರುದ್ಧ ಆರೋಪ ಸಾಬೀತಾದ ನಂತರ ಪೊಲೀಸರು ಚಾರ್ಜ್ಶೀಟ್ ಸಲ್ಲಿಸುತ್ತಾರೆ. ಒಂದು ವೇಳೆ ಆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಪರಾರಿಯಾಗಿರುತ್ತಾನೆ. ಇಲ್ಲವೇ ಸುಳ್ಳು ದೂರು ದಾಖಲಿಸಲಾಗಿರುತ್ತದೆ. ಸಾಕ್ಷಿಗಳು ದೊರಕಿರುವುದಿಲ್ಲ. ಇಂತರ ಪ್ರಕರಣಗಳಲ್ಲಿ ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸುವಂತಿಲ್ಲ. 'ಬಿ' ಅಥವಾ 'ಸಿ' ವರದಿಗಳನ್ನು ಸಲ್ಲಿಸಬೇಕಾಗುತ್ತದೆ.
'ಬಿ' ವರದಿ ಎಂದರೆ 3 ತಿಂಗಳೊಳಗೆ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿ ಸಿಗದಿರುವುದು, ಸುಳ್ಳು ಆರೋಪ, ಸಾಕ್ಷ್ಯಾಧಾರಗಳ ಕೊರತೆ ಇದೆ ಎಂಬುದು. ಅದೇ ರೀತಿ 'ಸಿ' ವರದಿ ಎಂದರೆ, ಆರೋಪಿ ಗೊತ್ತಿದ್ದರೂ ಆತನ ಸುಳಿವಿಲ್ಲದೆ ನಾಪತ್ತೆಯಾಗಿರುವುದು. ಪ್ರಕರಣದ ತನಿಖೆ ಸಂಪೂರ್ಣ ಸಾಧ್ಯವಾಗದಿದ್ದಾಗ ಈ ವರದಿಗಳನ್ನು ಸಲ್ಲಿಸಲಾಗುತ್ತದೆ.
ಒಂದು ವೇಳೆ ಆರೋಪಿ ಮತ್ತೆ ಪತ್ತೆಯಾದಲ್ಲಿ ಎಷ್ಟು ವರ್ಷಗಳ ನಂತರವಾದರೂ ಪ್ರಕರಣವನ್ನು ಮತ್ತೆ ತೆರೆಯಬಹುದು ಹಾಗೂ ಆರೋಪಿಯನ್ನು ಬಂಧಿಸಲು ಅವಕಾಶವಿರುತ್ತದೆ. ಯಾವುದೇ ಪ್ರಕರಣದ ಮರುತನಿಖೆ ಆಗಬೇಕಿದ್ದಾಗ ಪೊಲೀಸರು ಈ ವಿಷಯವನ್ನು ನ್ಯಾಯಾಧೀಶರಿಗೆ ಮನವಿ ಮಾಡಿಕೊಡಬೇಕು. ನ್ಯಾಯಾಲಯ ಅದನ್ನು ಒಪ್ಪಿದರೆ ಅವನು ನಿರಪರಾಧಿ ಎಂದರ್ಥ.
ಜನರು ಕೆಲವೊಮ್ಮೆ ಇಂತಹ ಪ್ರಕರಣಗಳನ್ನು ದಾಖಲಿಸುವುದರಿಂದ ಪೊಲೀಸರ ಸಮಯ ವ್ಯರ್ಥವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಸುಳ್ಳು ದೂರು ದಾಖಲಿಸಬೇಡಿ. ದೂರು ಸರಿ ಇದ್ದಲ್ಲಿ ಆರೋಪಿಗಳ ಪತ್ತೆಗೆ ಸಹಕರಿಸಿ.
- ಶಾಂತ ತಮ್ಮಯ್ಯ