ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕಿರಣ್ ಆಸ್ತಿಕತೆ

ಕಿರಣ್ ಉಪಾಧ್ಯಾಯ 'ಬೈಟು ಕಾಫಿ' ಓದುಗರಿಗೆ 'ಆಸ್ತಿ ಕತೆ' ಅಂಕಣದ ಮೂಲಕ ಪರಿಚಿತರು. ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಪ್ರಕಟಿಸಿರುವ 'ಆಸ್ತಿ ಕತೆ' ...

Rashmi Kasaragodu
Updated On : 2 Aug 2013, 7:20 am

ಕಿರಣ್ ಉಪಾಧ್ಯಾಯ 'ಬೈಟು ಕಾಫಿ' ಓದುಗರಿಗೆ 'ಆಸ್ತಿ ಕತೆ' ಅಂಕಣದ ಮೂಲಕ ಪರಿಚಿತರು. ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಪ್ರಕಟಿಸಿರುವ 'ಆಸ್ತಿ ಕತೆ' ಕೃತಿ ಕೂಡ ನಾಳೆ
ಬಿಡುಗಡೆಯಾಗುತ್ತಿದೆ.
ಸ್ವಂತ ಉದ್ಯಮಿಗಳಿಗೆ ಓದು, ಬರಹ, ಕಲೆ ಮೊದಲಾದ ಹವ್ಯಾಸಗಳಿರುತ್ತವೆ ಎಂದು ಕಲ್ಪಿಸಿಕೊಳ್ಳುವುದು ಸ್ವಲ್ಪ ಕಷ್ಟವೇ. ಮೂಲತಃ ಕುಮಟಾದರು. ಓದಿದ್ದು ಬೆಳೆದದ್ದು ಶಿರಸಿಯಲ್ಲಿ. 15 ವರ್ಷ ಸೌದಿ ಅರೇಬಿಯದಲ್ಲಿ ಎಂಜಿನಿಯರ್ ಆಗಿ ಸೇವೆ. ಪ್ರಸ್ತುತ ಸೌದಿ ಅರೇಬಿಯ ಮತ್ತು ಬಹರೇನ್‌ನಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದಾರೆ. ಬಹರೇನ್‌ನಲ್ಲಿ 'ಸಾರ್ಥ ಫೌಂಡೇಶನ್‌' ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಕುಮಟಾದ 'ಸಾರ್ಥ ಪ್ರತಿಷ್ಠಾನ'ದ ಸ್ಥಾಪಕರಲ್ಲಿ ಒಬ್ಬರು. ಓದು, ಯಕ್ಷಗಾನ, ನಾಟಕ ಅವರ ಹವ್ಯಾಸ.
'ವಾರಾಂತ್ಯದಲ್ಲಿ ಗೆಳೆಯರು ಸೇರುತ್ತಿದ್ದಾಗ ಕಾಲ ಕಳೆಯಲು ಯಾವುದಾದರೊಂದು ಪುಸ್ತಕ ಆರಿಸಿಕೊಂಡು ಚರ್ಚಿಸುತ್ತೇವೆ. ಇಂಥ ಚರ್ಚೆಗಳಲ್ಲಿ ನನ್ನನ್ನು ಬಹುವಾಗಿ ಸೆಳೆದಿದ್ದು ರಾಜೇಶ್ ವಟ್ಟಾಮವರ್ ಅವರ 'ದಿ ಮಿಥ್ ಕಾಲ್ಡ್ ವೆಲ್ತ್‌'. ಇದನ್ನು ಅನುವಾದಿಸಲೇಬೇಕೆಂದು ನಿರ್ಧರಿಸಿಬಿಟ್ಟಿದ್ದೆ. 2009ರಲ್ಲಿ ಕೈಗೊಂಡಿದ್ದ ತೀರ್ಮಾನ ಈಗ ಕಾರ್ಯರೂಪಕ್ಕೆ ಬರುತ್ತಿದೆ' ಎಂದು ಮುಗುಳ್ನಗುತ್ತಾರೆ ಕಿರಣ್. ಆಸ್ತಿ ಮತ್ತು ಶ್ರೀಮಂತಿಕೆಯನ್ನು ಕೃತಿಯಲ್ಲಿ ಹಲವಾರು ದೃಷ್ಟಿಕೋನಗಳಿಂದ ವಿಶ್ಲೇಷಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments