ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಪ್ರಯಾಸದ ಪ್ರಯಾಣ ಪರಿವ್ರಜನ!

ಸ್ವಾಮಿ ವಿವೇಕಾನಂದರು ಹೃಷಿಕೇಶವನ್ನು ತಲುಪಿ ಅಲ್ಲಿಂದ ಬದರಿ-ಕೇದಾರಗಳಿಗೆ ಹೋಗುವವರಿದ್ದರು. ಹಿಮಾಲಯದ ಉನ್ನತ ಶಿಖರಗಳನ್ನೇರಿ ಹೋಗುವ ...

Rashmi Kasaragodu
Updated On : 2 Aug 2013, 2:17 am

ಸ್ವಾಮಿ ವಿವೇಕಾನಂದರು ಹೃಷಿಕೇಶವನ್ನು ತಲುಪಿ ಅಲ್ಲಿಂದ ಬದರಿ-ಕೇದಾರಗಳಿಗೆ ಹೋಗುವವರಿದ್ದರು. ಹಿಮಾಲಯದ ಉನ್ನತ ಶಿಖರಗಳನ್ನೇರಿ ಹೋಗುವ ಉತ್ಸಾಹ ಅವರಲ್ಲಿ ತುಡಿಯುತ್ತಿತ್ತು. ಆದರೆ ಅದಕ್ಕೆ ತಡೆಯಾಗಿ ಶಿಷ್ಯ ಶರಶ್ಚಂದ್ರನಿದ್ದ. ತನ್ನ ಅಭಿಲಾಷೆಯನ್ನು ತಡೆಯಲಾರದೆ ಅವರು 'ಛೆ! ನೀನು ನನ್ನ ಕಾಲಿಗೊಂದು ಸಂಕೋಲೆಯ ತರಹ ಆಗಿಬಿಟ್ಟೆ. ನಾನೊಬ್ಬನೇ ಹಾಯಾಗಿ ಅಲೆದಾಡಿಕೊಂಡಿದ್ದೆ. ಈಗ ನೀನೊಬ್ಬ ಬಂದು ನನಗೆ ಒಳ್ಳೆ ತಲೆನೋವಾಗಿಬಿಟ್ಟೆ. ಸಾಕಾಯಿತು! ನಾನು ನನ್ನ ದಾರಿ ಹಿಡಿದು ಹೋಗುತ್ತೇನೆ. ಇನ್ನು ನನ್ನಿಂದ ಇಲ್ಲಿರಲು ಸಾಧ್ಯವಿಲ್ಲ' ಎಂದು ರೇಗಾಡಿ, ದಂಡಕಮಂಡಲ ಹಿಡಿದು ಹೊರಟೇಬಿಟ್ಟರು.
ಆದರೆ ಮೂರ್ನಾಲ್ಕು ಗಂಟೆಗಳ ಬಳಿಕ ಸ್ವಾಮೀಜಿ ವಾಪಸ್ ಬಂದರು. ಶರಶ್ಚಂದ್ರನಿಗೆ ಹೋದ ಜೀವ ಬಂದಂತಾಯಿತು. ಶಿಷ್ಯನನ್ನು ನೋಡುತ್ತ ಮೃದು ದನಿಯಲ್ಲಿ 'ಓ ಶರತ್, ನನಗೇನಾದರೂ ಸ್ವಲ್ಪ ತಿನ್ನಲು ಕೊಡುತ್ತೀಯಾ? ನನಗೆ ತುಂಬಾ ಹಸಿವು' ಎಂದರು. ಶರಶ್ಚಂದ್ರ ತಕ್ಷಣ ಅಡುಗೆ ಮಾಡಿ ಬಡಿಸಿದ. 'ನಿಜವಾಗಿಯೂ ನೀನು ನನ್ನ ಕಾಲಿಗೊಂದು ಸಂಕೋಲೆಯಾಗಿಬಿಟ್ಟೆ. ನಾನು ಸಾಕಷ್ಟು ದೂರ ಹೋಗಿದ್ದೆ. ಆದರೆ ಇಲ್ಲೊಬ್ಬ ಒಂಟಿಯಾಗಿದ್ದಾನಲ್ಲ ಎಂದು ಹಿಂದಿರುಗಿ ಬಂದೆ' ಎಂದರು.
ಒಂದು ದಿನ ಬಳಲಿದ್ದ ಶರಶ್ಚಂದ್ರ 'ಸ್ವಾಮೀಜಿ ನೀವು ನನ್ನ ಕೈಬಿಡುತ್ತೀರಾ?' ಎಂದು ಕೇಳಿದ. ತಕ್ಷಣ ಸ್ವಾಮೀಜಿ 'ಛೀ ಮೂರ್ಖ, ನಿನ್ನ ಬೂಟುಗಳನ್ನೂ ಹೊತ್ತಿದ್ದೇನೆ, ನೆನಪಿದೆಯಾ?' ಎಂದು ಛೇಡಿಸಿದರು. ಒಮ್ಮೆ ಸ್ವೀಕರಿಸಿದ್ದನ್ನು ಎಷ್ಟೇ ಕಷ್ಟ ಎದುರಾದರೂ ಬಿಟ್ಟುಕೊಡುವ ಜಾಯಮಾನವಾಗಿರಲಿಲ್ಲ ಸ್ವಾಮೀಜಿಯದು.

-ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement