ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಹೈಬಿಪಿ ಇದ್ದರೆ ಬದುಕು ಮುಗಿಯಿತು ಎಂದರ್ಥವಲ್ಲ

Rashmi Kasaragodu
Updated On : 2 Aug 2013, 2:11 am

ತಮಗೆ ಹೈಬಿಪಿ ಇದೆ ಎನ್ನುವುದು ಗೊತ್ತಾದ ತಕ್ಷಣ ಬಹಳಷ್ಟು ಮಂದಿ ವಿಲಕ್ಷಣ ಸಂಕಟಕ್ಕೆ ಒಳಗಾಗಿ ಬಿಡುತ್ತಾರೆ. ತಮ್ಮ ಬದುಕೇ ಮುಗಿದು ಹೋಯಿತು ಎನ್ನುವಷ್ಟರ ಮಟ್ಟಿಗೆ ಜೀವನದಲ್ಲಿ ಜಿಗುಪ್ಸೆ ಬೆಳೆಸಿಕೊಂಡು ಬಿಡುತ್ತಾರೆ. 'ಹೈಬಿಪಿ ಈಗೀಗ ಸಾಮಾನ್ಯ, ಜೀವನಶೈಲಿ ಮತ್ತು ಆಹಾರ ವ್ಯವಸ್ಥೆಯಲ್ಲಿ ಸ್ವಲ್ಪಮಟ್ಟಿನ ಬದಲಾವಣೆ ಮಾಡಿಕೊಂಡರೆ ಅಧಿಕ ರಕ್ತದೊತ್ತಡ ಕಡಿಮೆಯಾಗಿ ಸಾಮಾನ್ಯ ಸ್ಥಿತಿಗೆ ಮರಳಲು ಸಾಧ್ಯವಿದೆ' ಎನ್ನುವುದನ್ನು ತಿಳಿಸಿಕೊಟ್ಟು ಧೈರ್ಯ ತುಂಬಬೇಕಾದ ಹೊಣೆ ವೈದ್ಯರದ್ದು. ಆದರೆ ಮಾತ್ರೆಯನ್ನು ಸರಿಯಾಗಿ ಸೇವಿಸದೇ ಇರಬಹುದು ಎನ್ನುವ ಅನುಮಾನದಿಂದಲೋ ಅಥವಾ ಅರ್ಧದಲ್ಲೇ ಬಿಟ್ಟು ಬಿಡಬಹುದು ಎನ್ನುವ ಭಯದಿಂದಲೋ ಬಹಳಷ್ಟು ವೈದ್ಯರು ತಿಳಿವಳಿಕೆ ನೀಡುವುದಕ್ಕಿಂತ ಭಯ ಹುಟ್ಟಿಸುವ ಕೆಲಸ ಮಾಡುತ್ತಾರೆ ಎನ್ನುವುದೂ ನಿಜವೇ. ನಾನು ನೋಡಿರುವಂತೆ ಅನೇಕ ಪ್ರಕರಣಗಳಲ್ಲಿ ಹೀಗಾಗಿದೆ.
ಬಹುಶಃ ನಿಮಗೆಲ್ಲ ಅಚ್ಚರಿಯಾಗಬಹುದು. ಸೋಂಪು ತಿನ್ನದೇ ಇರುವವರು ಸಿಗಲಿಕ್ಕಿಲ್ಲ. ಹೋಟೆಲ್‌ಗಳಲ್ಲಿ 'ಬಿಲ್ ತಟ್ಟೆ'ಯಲ್ಲಿ ಇದನ್ನು ಇರಲೇಬೇಕು. ಸೋಂಪು ಸುವಾಸನೆದಾಯಕ. ಇದೊಂದು ಮೌತ್ ಫ್ರೆಶನರ್. ಹೀಗಾಗಿ ತಿಂಡಿ ತಿಂದ ನಂತರ ಅಥವಾ ಆಹಾರ ಸೇವಿಸಿದ ಬಳಿಕ ಸೋಂಪು ತಿಂದರೆ ಬಾಯಿ ವಾಸನೆ ಮಾಯವಾಗುತ್ತದೆ. ಬಹುತೇಕರಿಗೆ ಗೊತ್ತಿರುವುದು ಇಷ್ಟೇ. ಇನ್ನು ಕೆಲವರು ಇದು ಜೀರ್ಣಕಾರಿ ಎಂದು ಹೇಳಿಯಾರು. ಅಧಿಕ ರಕ್ತದೊತ್ತಡದಿಂದ ಬಳಲುವವರಿಗೂ ಇದು ಪ್ರಯೋಜನಕಾರಿ ಎನ್ನುವುದು ಎಷ್ಟು ಂಮದಿಗೆ ಗೊತ್ತಿದೆ? ಏಷ್ಯನ್ನರು ಕ್ರಿಸ್ತಪೂರ್ವ 200ನೇ ಇಸವಿಯುಂದಲೇ ಇದನ್ನು ಅಧಿಕ ರಕ್ತದೊತ್ತಡಕ್ಕೆ ಮದ್ದಿನ ರೀತಿಯಲ್ಲಿ ಬಳಸುತ್ತಿದ್ದರಂತೆ! ಚಿಕಾಗೋದ ಸಂಶೋಧಕ ಡಾ.ವಿಲಿಯಂ ಜೆ.ಇಲಿಯೋಟ್ ಇದನ್ನು ಅಧಿಕೃತವಾಗಿ ದಾಖಲಿಸಿದ್ದಾರೆ.
ವಿಲಿಯಂ ಅವರ ಶಿಷ್ಯನಾಗಿದ್ದ ವಿಯೆಟ್ನಾಂನ ಕ್ವಾಂಗ್ ಟೀ ಲೀ, ಹೈಬಿಪಿಯಿಂದ ಬಳಲುತ್ತಿದ್ದ ತಮ್ಮ ತಂದೆಯನ್ನು ಏಷ್ಯದ ನಾಟಿ ವೈದ್ಯರೊಬ್ಬರು ಸಂಪೂರ್ಣ ಗುಣಪಡಿಸಿದ್ದಾರೆ. ದಿನಕ್ಕೆ ಎರಡು ಸೋಂಪಿನ ಗಿಡದ ದಂಟು ತಿನ್ನಲು ಸೂಚಿಸಿದ್ದರು. ವಾರದ ಬಳಿಕ ಪರೀಕ್ಷಿಸಿದಾಗ ತಂದೆಯ ರಕ್ತದೊತ್ತಡ 158/96 ನಿಂದ  118/82ಗೆ ಇಳಿದಿತ್ತು ಎಂದು ಹೇಳಿದನಂತೆ.
ಸೋಂಪಿನ ಗಿಡದಲ್ಲಿನ ಯಾವ ರಾಸಾಯನಿಕ ರಕ್ತದೊತ್ತಡ ಕಡಿಮೆ ಮಾಡಿರಬಹುದು ಎಂದು ಊಹಿಸಿದ ವಿಲಿಯಂ, ಅದರ ಸಾರ ತೆಗೆದು ಮೊಲಗಳಿಗೆ ನೀಡಿದರು. ಅವರ ಊಹೆ ಸರಿಯಾಗಿಯೇ ಇತ್ತು. ಸೋಂಪಿನಲ್ಲಿ ಸೋಡಿಯಂ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ರಕ್ತದೊತ್ತಡ ಕಡಿಮೆ ಮಾಡುವುದಲ್ಲದೇ ಕೆಲವು ಹಾರ್ಮೋನುಗಳ ಮೇಲೆಯೂ ಪ್ರಭಾವ ಬೀರುತ್ತದೆ ಎನ್ನುವ ವಿಲಿಯಂ, ಮಾನಸಿಕ ಒತ್ತಡ ಮತ್ತು ಹೈಪಿಗಳಿಂದ ಬಳಲುತ್ತಿರುವವರಿಗೆ ಸೋಂಪು ಪರಿಣಾಮಕಾರಿ ಎನ್ನುತ್ತಾರೆ.


-ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement