ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಅನವರತ ನೀನೆನ್ನ ಹಿಂದೆಯೇ ಇರುತಿರುವೆ!

Mainashree
Updated On : 4 Aug 2013, 2:31 am

1888ರ ಅಂತ್ಯದಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಪರ್ಯಟನೆಯನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಿ ಕೊಲ್ಕತಾದ ಬಾರಾನಗೋರ್ ಮಠಕ್ಕೆ ವಾಪಸಾದರು. ಈ ಸಲ ಅವರು ಒಂದು ವರ್ಷಗಳ ಕಾಲ ಮಠದಲ್ಲಿದ್ದು ಪೂಜೆ, ಪ್ರಾರ್ಥನೆ, ಧ್ಯಾನ-ಜಪ ಹಾಗೂ ಶಾಸ್ತ್ರಾಧ್ಯಯನವನ್ನು ತೀವ್ರಗೊಳಿಸಿ ವಿಶೇಷ ಆಧ್ಯಾತ್ಮಿಕ ವಾತಾವರಣವನ್ನು ನಿರ್ಮಾಣ ಮಾಡಿದರು. ಮಠಕ್ಕೆ ವಾರಣಾಸಿಯಿಂದ ಅಮೂಲ್ಯ ಗ್ರಂಥಗಳನ್ನು ತರಿಸಿ ಶಾಸ್ತ್ರಾಧ್ಯಯನವನ್ನು ಚುರುಕುಗೊಳಿಸಿದರು. ಮುಂದೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಾಗೂ ಸಮಸ್ತ ಭಾರತದಲ್ಲಿ ಯಾವ ದಿವ್ಯ ಸಂದೇಶಗಳನ್ನು ಬಿತ್ತರಿಸಿ ಲೋಕವಿಖ್ಯಾತರಾದರೋ ಅವುಗಳನ್ನು ಸೋದರಸಂನ್ಯಾಸಿಗಳಿಗೆ ವಿವರಿಸಿ ಅವರ ಜ್ಞಾನವನ್ನು ಹೆಚ್ಚಿಸುತ್ತಿದ್ದರು, ದೃಷ್ಟಿಕೋನವನ್ನು ವಿಶಾಲಗೊಳಿಸುತ್ತಿದ್ದರು; ಜತೆಗೆ ತರಬೇತಿಯನ್ನು ನೀಡುತ್ತಿದ್ದರು.
ವಿವೇಕಾನಂದರು ಅಲಹಾಬಾದಿನ ಪವಾಹಾರಿ ಬಾಬಾರಿಂದ ಯೋಗವನ್ನು ಕಲಿಯಲು ಬಯಸಿದ್ದರು. ದುರ್ಬಲ ಶರೀರವನ್ನು ಬಲಪಡಿಸಿಕೊಳ್ಳುವ ಹಠಯೋಗವನ್ನು ಕಲಿಯಲು ಆಸಕ್ತರಾಗಿದ್ದರು. ಅಂದು ಅವರು ದೀಕ್ಷೆ ಸ್ವೀಕರಿಸಲು ನಿಶ್ಚಯಿಸಿದ್ದರು, ಆ ದಿನ ಸಂಜೆ ಸ್ವಾಮೀಜಿಗೆ ರಾಮಕೃಷ್ಣರ ದರ್ಶನವಾಯಿತು! ಸ್ವಾಮೀಜಿಗೆ ಆಶ್ಚರ್ಯವಾಯಿತು. ದೀಕ್ಷೆ ಪಡೆಯುವ ವಿಚಾರ ಮನಸ್ಸಿನಲ್ಲಿ ಸುಳಿದಾಗಲೆಲ್ಲ ಗುರುವಿನ ದರ್ಶನವಾಗತೊಡಗಿತು. ಸ್ವಾಮೀಜಿಗೆ ತಮ್ಮ ತಪ್ಪಿನ ಅರಿವಾಗಿ, ಬಾಬಾರಿಂದ ದೀಕ್ಷೆ ಪಡೆಯುವ ಆಲೋಚನೆಯನ್ನು ಮನಸ್ಸಿನಿಂದ ತಳ್ಳಿಹಾಕಿದರು. ರಾಮಕೃಷ್ಣರ ದಿವ್ಯಾನುಭವವನ್ನು ಕುರಿತು 'ಅನವರತ ನೀನೆನ್ನ ಹಿಂದೆಯೇ ಇರುತಿರುವೆ!' ಎಂಬ ಕವನವನ್ನು ರಚಿಸಿ ಹಾಡಿದರು.

-ಆನಂದ ಎಸ್.ಎನ್.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement