ಬಾಯ್ಫ್ರೆಂಡ್!
ಬಾಯ್ಫ್ರೆಂಡ್ ಜತೆಗೆ ಇದ್ರೆ ನಿಮಗೆ ಏನು ಅನಿಸುತ್ತೆ?ಎಂದು ಹುಡ್ಗೀರಲ್ಲಿ ಕೇಳಿದರೆ ಕಂಫರ್ಟಬಲ್, ಸ್ಟೈಲಿಷ್, ಕ್ಲಾಸಿ, ಈಸಿ, ಲವ್ಲಿ ಹೀಗೆ ಪಟ ಪಟ ಅಂತಾ ಉತ್ತರಿಸುತ್ತಾರೆ. ಇದೇನಪ್ಪಾ? ಅಂತಾ ಯೋಚಿಸ್ಬೇಡಿ. ನಾವು ಹೇಳಿದ್ದು ಬಾಯ್ಫ್ರೆಂಡ್ ಜೀನ್ಸ್ ಬಗ್ಗೆ. ತಮ್ಮ ಸ್ವಂತ ಜೀನ್ಸ್ ಧರಿಸಿ ಬೋರ್ ಆದಾಗ ಕೆಲವು ಹಾಲಿವುಡ್ ನಟಿಯರು ಅವರ ಬಾಯ್ಫ್ರೆಂಡ್ನ ಜೀನ್ಸ್ನ್ನು ತೊಟ್ಟು ಮಾಡಿದ ಎಡವಟ್ಟೇ ಈ ಜೀನ್ಸ್ ಉಗಮಕ್ಕೆ ಕಾರಣ!
ಸ್ಕಿನ್ನೀ ಜೀನ್ಸ್ನಿಂದ ಮುಕ್ತವಾಗಲು ತಮ್ಮ ಬಾಯ್ಫ್ರೆಂಡ್ ಧರಿಸುತ್ತಿದ್ದ ಲೂಜ್ ಜೀನ್ಸ್ ಧರಿಸಿ ಹಾಲಿವುಡ್ ನಟೀಮಣಿಯರು ಸಾರ್ವಜನಿಕ ವೇದಿಕೆಗಳಲ್ಲಿ ಪ್ರತ್ಯಕ್ಷವಾಗಿದ್ದೇ ತಡ, ಹೊಸತೊಂದು ಫ್ಯಾಷನ್ ಶುರುವಾಗಿಯೇ ಬಿಟ್ಟಿತು. ಬಾಯ್ಫ್ರೆಂಡ್ ಜಾಕೆಟ್, ಬ್ಲೇಜರ್, ಟೀಶರ್ಟ್ ಮೊದಲಾದವುಗಳು ಮಾರುಕಟ್ಟೆಗೆ ಬಂತಾದರೂ, ಬಾಯ್ಫ್ರೆಂಡ್ ಜೀನ್ಸ್ ಮಾತ್ರ ಮಾರುಕಟ್ಟೆಯಲ್ಲಿ ಅಧಿಪತ್ಯ ಸ್ಥಾಪಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಈ ಜೀನ್ಸ್ಗೆ ಯುನಿಸೆಕ್ಸ್ ಲುಕ್ ಇದ್ದರೂ ಮಹಿಳೆಯರಿಗೆ ಇವು ಅಚ್ಚುಮೆಚ್ಚು. ಇವುಗಳ ರಿಲ್ಯಾಕ್ಸ್ಡ್ ಲುಕ್ನಿಂದಾಗಿಯೇ ಹೆಚ್ಚಿನವರು ಇದರತ್ತ ಆಕರ್ಷಿತರಾಗಿದ್ದು. ಸಾಮಾನ್ಯವಾಗಿ ವುಮೆನ್ಸ್ ಜೀನ್ಸ್ಗಳಿಗಿಂತ ಒಂದು ಸೈಜ್ ಲೂಸಾಗಿರುವುದೇ ಇವುಗಳ ಪ್ರತ್ಯೇಕತೆ. ಇದನ್ನು ಧರಿಸುವಾಗ ಕೆಳಗೆ ಸ್ವಲ್ಪ ಮಡಚಿ ಧರಿಸುವುದು ಸ್ಟೈಲ್.
ಟೀ ಶರ್ಟ್, ಗಂಜಿ ಟಾಪ್, ಶರ್ಟ್ ಜತೆಗೆ ಬಾಯ್ಫ್ರೆಂಡ್ ಜೀನ್ಸ್ ಧರಿಸಬಹುದು. ಇವುಗಳು ಸಾಮಾನ್ಯವಾಗಿ ಲೋ ವೇಸ್ಟ್ ಜೀನ್ಸ್ಗಳೇ ಆಗಿದ್ದರೂ, ಮಿಡ್ ವೇಸ್ಟ್, ಹೈವೇಸ್ಟ್ ಜೀನ್ಸ್ಗಳೂ ಲಭ್ಯ. ಈ ಜೀನ್ಸ್ ಧರಿಸುವುದಾದರೆ ಗ್ಲಾಡಿಯೇಟರ್ ಸ್ಟೈಲ್ ಚಪ್ಪಲಿಗಳು, ಬೂಟ್ಸ್ ಅಥವಾ ಲೇಡಿಸ್ ಶೂ ಧರಿಸುವುದು ಉತ್ತಮ.
ಇನ್ನೇಕೆ ತಡ, ಬಾಯ್ಫ್ರೆಂಡ್ ಜೀನ್ಸ್ ಧರಿಸಿ ಸ್ಟೈಲಿಷ್ ಆಗಿ ಹೆಜ್ಜೆ ಹಾಕಿ.
- ಸಾರಾ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.