ದಿವಾ ಸ್ವಪ್ನ
ಅಲ್ಲಿ ಕ್ಯಾಟ್ವಾಕ್ ಮಾಡಿದ 200ಕ್ಕೂ ಹೆಚ್ಚು ಯುವತಿಯರಿಗೆ ಇದ್ದದ್ದು ವಿಶ್ವಸುಂದರಿ ಪಟ್ಟದ ಕನಸು. ಫ್ಯಾಶನ್ ನಗರಿ ಬೆಂಗಳೂರಿನಲ್ಲಿ ನಡೆದ 'ಇಂಡಿಯನ್ ದಿವಾ 2013'ರ ಅಡಿಶನ್ನಲ್ಲಿ ಕಂಡುಬಂದ ದೃಶ್ಯವಿದು. ಮುಂಬೈಯಲ್ಲಿ ಆ.19ರಂದು ನಡೆಯಲಿರುವ ಇಂಡಿಯನ್ ದಿವಾ ಅಂತಿಮ ಆಯ್ಕೆಗೆ ಮುನ್ನ ದಕ್ಷಿಣ ಸುಂದರಿಯ ಆಯ್ಕೆ ಇಲ್ಲಿ ನಡೆಯಿತು. ಗೆದ್ದ ತ್ರಿಶಲಾ ಚಾಂಡೋಲ್ ಎಂಬ ಚೆಲುವೆಯ ಮುಖದಲ್ಲಿ ವಿಶ್ವಸುಂದರಿ ಕಿರೀಟವನ್ನೇ ಗೆದ್ದ ಖುಷಿ. ಮುಂಬೈಯಲ್ಲೂ ಈಕೆ ಗೆದ್ದರೆ, ನವೆಂಬರ್ 9ರಂದು ಮಾಸ್ಕೋದಲ್ಲಿ ನಡೆಯಲಿರುವ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಭಾಗ್ಯಶಾಲಿಯಾಗಲಿದ್ದಾಳೆ. ಹೋಟೆಲ್ ಮೂವೆನ್ಪಿಕ್ನಲ್ಲಿ ನಡೆದ ಶೋದಲ್ಲಿ ಸುಂದರಿಯರು ತಮ್ಮ ಪ್ರತಿಭೆ ಚೆಲುವುಗಳನ್ನು ಹಣಾಹಣಿಗಿಟ್ಟರು. ಮಿಸ್ ಇಂಡಿಯಾ ಸಂಸ್ಥೆ ಇದನ್ನು ಏರ್ಪಡಿಸಿತ್ತು.
ಚಿತ್ರ: ಕೆ.ರವಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.