ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬಿಚ್ಚಿದ್ದಕ್ಕಿಂತ ಮುಚ್ಚಿಟ್ಟದ್ದರಲ್ಲೇ ಆಸಕ್ತಿ ಹೆಚ್ಚು

Lingaraj Badiger
Updated On : 6 Aug 2013, 3:59 am

ಪಾಲಕರ ಕರ್ತವ್ಯವೂ ಇದೆ
ವಿವಾಹ ಪೂರ್ವ ಲೈಂಗಿಕತೆ ಹೆಚ್ಚಾಗಲು ಕಾರಣ ಇಂದು ಗಂಡು-ಹೆಣ್ಣು ಎಂಬ ಭೇದ ಮರೆತು ಒಂದೆಡೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿರುವುದೂ ಕಾರಣ. ಸಹಜವಾಗಿ ದೇಹದ ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ಪ್ರೇಮದ ಹೆಸರಿನಲ್ಲಿ ಲೈಂಗಿಕತೆ ತಾಂಡವಾಡುತ್ತಿದೆ. ಇಂದಿನ ಕಾಮ ಪ್ರಚೋದಕ ಸಿನಿಮಾಗಳಿಂದ, ಇಂಟರ್‌ನೆಟ್‌ನಲ್ಲಿ ಸಿಗುವ ಅಶ್ಲೀಲ ದೃಶ್ಯಗಳು, ನಶೆ ಏರಿಸುವ ಡ್ರಗ್ಸ್ ಇವೂ ಯುವಪೀಳಿಗೆಯನ್ನು ಲೈಂಗಿಕವಾಗಿ ಕೆರಳಿಸುತ್ತಿವೆ. ವಿವಾಹಪೂರ್ವ ಲೈಂಗಿಕ ಕ್ರಿಯೆಯಲ್ಲಿ ಹೆಣ್ಣುಮಕ್ಕಳೂ ಉತ್ಸಾಹ ತೋರಿಸುತ್ತಿದ್ದಾರೆ ಎನ್ನುವ ಸಮೀಕ್ಷಾ ವರದಿಗಳು ನಿಜಕ್ಕೂ ಆಘಾತಕಾರಿ. ವಯಸ್ಸಿಗೆ ಬಂದ ಮಕ್ಕಳನ್ನು ಸ್ನೇಹಿತರಂತೆ ಕಾಣುವುದು, ಆರೋಗ್ಯಕರವಾದ ಲೈಂಗಿಕ ತಿಳುವಳಿಕೆ ನೀಡುವುದು, ವಿವಾಹ ಪೂರ್ವ ಲೈಂಗಿಕ ಕ್ರಿಯೆಯ ದುಷ್ಟ ಪರಿಣಾಮ ವಿವರಿಸುವುದು ಪೋಷಕರ ಕರ್ತವ್ಯ.
-ಎಂ.ಎಸ್. ಉಷಾಪ್ರಕಾಶ್, ಮೈಸೂರು

ಅತಿಯಾದರೆ ಅಮೃತವೂ ವಿಷ
ಬಿಚ್ಚಿದ್ದಕ್ಕಿಂತ ಮುಚ್ಚಿಟ್ಟದ್ದರಲ್ಲೇ ಆಸಕ್ತಿ ಹೆಚ್ಚು! ಹಸಿದು ತಿಂದರೆ ರುಚಿ ಹೆಚ್ಚು! ಇವು ಕೇವಲ ನಾಣ್ಣುಡಿಗಳಲ್ಲ. ಹಸಿವು, ನಿದ್ರೆ, ಮೈಥುನಗಳು ಮಾನವನಿಗೆ ಅತಿ ಮುಖ್ಯವೆಂಬ ಅಂಶವನ್ನು ಮನಗಂಡಿದ್ದರೂ 'ಅತಿಯಾದರೆ ಅಮೃತವೂ ವಿಷ' ಎಂಬ ಸತ್ಯವನ್ನೂ ತಿಳಿದಿದ್ದರು ನಮ್ಮ ಪೂರ್ವಿಕರು.  'ಮುಕ್ತ ಲೈಂಗಿಕತೆಯ' ದುಷ್ಪರಿಣಾಮಗಳನ್ನು ತಿಳಿದಿದ್ದರು ಹಿರಿಯರು. ಅದಕ್ಕೇ ಮದುವೆಯವರೆಗೂ ಹುಡುಗಿ ಕನ್ಯೆಯಾಗಿಯೂ, ಹುಡುಗ  ಬ್ರಹ್ಮಚಾರಿಯಾಗಿಯೂ ಇರಬೇಕೆಂಬ 'ನಿರ್ಬಂಧ' ವಿಧಿಸುತ್ತಿದ್ದರು. ಮದುವೆಯ ನಂತರ ಪತಿ-ಪತ್ನಿ ಲೈಂಗಿಕತೆಯ ಒಳಹರಿವುಗಳನ್ನು ಅರ್ಥೈಸಿಕೊಳ್ಳುತ್ತಿದ್ದರು. ಈಗ?!  'ಲೈಂಗಿಕತೆ' ಎಂಬುದು ಹಳಸಿದ ಆಹಾರದಂತಾಗಿ 'ಸೂರ್ಯೋದಯಕ್ಕೆ ಮದುವೆ! ಸೂರ್ಯಾಸ್ತದ ಹೊತ್ತಿಗೆ ಡಿವೋರ್ಸ್!' ಎಂಬ ಹಂತ ತಲುಪಿದೆ.
-ಪದ್ಮ ಪ್ರಕಾಶ್, ನಂಜನಗೂಡು

ಮಾನಸಿಕ ಸಿದ್ಧತೆ  ಬೇಕುವಿವಾಹ ಪೂರ್ವ ಲೈಂಗಿಕ ಕ್ರಿಯೆ ನಿಶ್ಚಿತವಾಗಿಯೂ ತಪ್ಪು. ಭಾರತೀಯ ವಿವಾಹ ಕಾಯ್ದೆಯಂತೆ ಹೆಣ್ಣಿಗೆ 18, ಗಂಡಿಗೆ 21 ವರ್ಷ ನಿಗದಿಪಡಿಸಿದ್ದರೂ ಆಧುನಿಕ ಜೀವನ ಶೈಲಿಯಲ್ಲಿ ಹದಿಹರೆಯದ ಯುವಕರು ಪ್ರೀತಿಯ ಗುಂಗಿನಲ್ಲಿ ಸಿಲುಕಿ, ಲೈಂಗಿಕ ಪ್ರಲೋಭನೆಗೆ ಒಳಗಾಗಿ, ತೊಂದರೆಗೆ ಸಿಲುಕುವುದು ಸಹಜ. ಆದರೆ ಕೇವಲ ಕ್ಷಣಮಾತ್ರದ ಅವಘಡಗಿಂದ ಸಮಾಜದಲ್ಲಿ ಅವಹೇಳನ ಎದುರಿಸುವಂತಾಗುತ್ತದೆ. ಇದರಿಂದ ಅವರಷ್ಟೇ ಅಲ್ಲದೆ ಕುಟುಂಬದವರೂ ಮುಜುಗರ ಅನುಭವಿಸಬೇಕಾಗುತ್ತದೆ. ವಿವಾಹಪೂರ್ವ ಲೈಂಗಿಕ ಕ್ರಿಯೆಯಲ್ಲಿ ತರುಣ, ತರುಣಿಯರು ಅದರ ಪರಿಣಾಮಗಳನ್ನು ಎದುರಿಸಲು ಇನ್ನೂ ಮಾನಸಿಕವಾಗಿ ಸಿದ್ಧರಾಗಿರುವುದಿಲ್ಲ. ವಿವೇಚನೆ ಬೆಳೆಸಿಕೊಂಡು, ಮಾನಸಿಕ ಸ್ಥಿರತೆ ಗಳಿಸಿಕೊಡುವ ವಿವಾಹ ನಂತರದ ಲೈಂಗಿಕ ಜೀವನವನ್ನು ಸುಖಮಯವಾಗಿಸಿಕೊಳ್ಳುವ ಬಗ್ಗೆ ಗಮನ ಕೊಡುವುದು ಅಗತ್ಯ.
-ಪೂಜಾಕ್ಷಿ ವೆಂಕಟೇಶ್, ಮಂಡ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement