ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಅಪ್ಪಟ ಚಿನ್ನ

Lingaraj Badiger
Updated On : 16 Aug 2013, 3:46 am

ದಕ್ಷಿಣ ಕನ್ನಡ ಎಂದಾಕ್ಷಣ ಮನಸ್ಸಿನ ಮೂಲೆಯಲ್ಲಿ ನಂಬಿಕೆ, ವಿಶ್ವಾಸ ಮೂಡುತ್ತದೆ. ಯಾವುದೇ ಊರಿನಲ್ಲಿ ಉಡುಪಿ ಹೊಟೇಲ್ ಎಂದಾಕ್ಷಣವೇ ನಾವು ಹೇಗೆ ಅಲ್ಲಿಗೆ ತೆರಳುತ್ತೇವೋ ಅಂಥದ್ದೇ ವಿಶ್ವಾಸಾರ್ಹತೆ, ನಂಬಿಕೆ ಚಿನ್ನದ ಬಗೆಗೂ. ಕರಾವಳಿ ಚಿನ್ನವೆಂದರೆ ಅಪ್ಪಟ. ಅಲ್ಲಿ ಮೋಸ ಹೋಗುವ ಬಗ್ಗೆ ತಲೆಬಿಸಿ ಮಾಡಿಕೊಳ್ಳುವ ಅವಶ್ಯಕತೆಯೇ ಇಲ್ಲ.
ದೀರ್ಘಕಾಲ ಬಾಳಿಕೆ, ಶುದ್ಧತೆಯಲ್ಲಿ ಶೇ. 91.6 ಭರವಸೆ, ಶುದ್ಧತೆಯನ್ನು ಪ್ರಮಾಣಿಕರಿಸುವುದರಿಂದ ಎಲ್ಲೇ ಮಾರಿದರೂ ಸಿಗುವ ಉತ್ತಮ ಬೆಲೆ, ಉತ್ತಮ ಸಲಹೆ ಹಾಗೂ ಸೇವೆ ಮತ್ತು ನಿತ್ಯ ಬಳಕೆಗೆ ಬೇಕಾದ ಆಭರಣಗಳು ವಿಭಿನ್ನ ವಿನ್ಯಾಸದಲ್ಲಿ ಹೇರಳವಾಗಿ ದೊರೆಯುವುದರಿಂದ ಕರಾವಳಿ ಚಿನ್ನಕ್ಕೆ ಎಲ್ಲಿಲ್ಲದ ಬೇಡಿಕೆ.

'ಆಭರಣಗಳನ್ನು ಕೈಗಳಲ್ಲಿಯೇ ವಿನ್ಯಾಸಗೊಳಿಸುತ್ತೇವೆ. ಒಂದು ಸರಿಗೆಯನ್ನು ಇನ್ನೊಂದು ಸರಿಗೆಗೆ ಬೆಸೆಯುವಾಗ ಸಾಕಷ್ಟು ಜಾಗರೂಕತೆಯಿಂದ, ತಾಳ್ಮೆಯಿಂದ ಕೆಲಸ ನಿರ್ವಹಿಸಲಾಗುತ್ತದೆ. ಚಿನ್ನ ಮತ್ತು ತಾಮ್ರವನ್ನು ನಿಗದಿತ ಪ್ರಮಾಣದಲ್ಲಿ ಸೂಕ್ತ ರೀತಿಯಲ್ಲಿ ಹದಮಾಡಿ ಮಿಶ್ರಣಗೊಳಿಸಿ, ನಂತರ ಪರಿಶೀಲಿಸಿಯೇ ಆಭರಣ ತಯಾರಿಸುತ್ತಾರೆ' ಎನ್ನುತ್ತಾರೆ ಪುತ್ತೂರು ಮುಳಿಯ ಕೇಶವ ಭಟ್ಟ ಮತ್ತು ಸನ್ಸ್‌ನ ನುರಿತ ಚಿನ್ನ ವಿನ್ಯಾಸಕರು.
ಮಂಗಳಸೂತ್ರಕ್ಕೂ ಬೇಡಿಕೆ

ಕರಾವಳಿಯ ಮಂಗಳಸೂತ್ರದ ವಿನ್ಯಾಸವೂ ಸದೃಢವಾಗಿರುತ್ತದೆ. ಮುಷ್ಟಿ ಕರಿಮಣಿ ಸರದಲ್ಲಿ ಒಂದು ಮುಷ್ಟಿ ಮಾಡಲು, ಸದೃಢ ಸರಿಗೆಯನ್ನು ಪೋಣಿಸಲು ದೀರ್ಘ ಸಮಯ ಬೇಕು. ಮುಷ್ಟಿ ಮಾಡಲು ಸರಿಗೆಯ 3 ಭಾಗ ಮಾಡಿ 2 ಭಾಗದಿಂದ ಮೊದಲು, ಒಂದರೊಳಗೆ ಒಂದು ಇರುವಂತೆ ಹೆಣೆದು ಉಳಿದ ಇನ್ನೊಂದು ಸರಿಗೆಯನ್ನು ಅದರೊಳಗೆ ಬೆಸೆದು ತಯಾರಿಸುತ್ತಾರೆ. ಇಷ್ಟು ಸದೃಢ ವಿನ್ಯಾಸ ದೀರ್ಘಕಾಲ ಬರುತ್ತದೆ ಎಂಬುದರಲ್ಲಿ ಅನುಮಾನ ಇಲ್ಲ. ಅದಕ್ಕಾಗಿಯೇ ಕರಾವಳಿಯ ಮಂಗಳಸೂತ್ರಗಳು ಎಲ್ಲೆಡೆ ಪ್ರಸಿದ್ಧ. ಹೊಸ ಆಭರಣಗಳನ್ನು ತಯಾರಿಸುವಾಗಲೂ ಸಾಕಷ್ಟು ಮಾಹಿತಿ ಸಂಗ್ರಹಿಸಿಯೇ ಆಭರಣ ತಯಾರಿಸುವುದನ್ನು ಇಲ್ಲಿಯವರು ರೂಢಿಸಿಕೊಂಡಿದ್ದಾರೆ.

- ಕೃಷ್ಣವೇಣಿ ಪ್ರಸಾದ್ ಮುಳಿಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments