ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ದೈವೇಚ್ಛೆಗೆ ತಲೆಬಾಗಿದರು!

Mainashree
Updated On : 18 Aug 2013, 1:09 am

ಹಿಂದೆ ರಾಮಕೃಷ್ಣರ ಕೃಪೆಯಿಂದ ಅನುಭವಿಸಿದ ನಿರ್ವಿಕಲ್ಪ ಸಮಾಧಿಸ್ಥಿತಿಗೇರಬೇಕೆಂಬ ಮಹದಾಸೆಯಿಂದ ವಿವೇಕಾನಂದರು ಹಿಮಾಲಯಕ್ಕೆ ಬಂದಿದ್ದರು. ಆದರೆ ಎಷ್ಟು ಪ್ರಯತ್ನಿಸಿದರೂ ಅದು ಸಾಧ್ಯವಾಗುತ್ತಿಲ್ಲ. ನಿರ್ವಿಕಲ್ಪ ಸಮಾಧಿಯ ಸ್ಥರಕ್ಕೇರಲಾಗುತ್ತಿಲ್ಲ. ಹೀಗಿರುವಾಗ ದಾರುಣ ಸುದ್ದಿಯೊಂದು ಬಂದಿತು! ಅವರ ಒಬ್ಬಳು ಮುದ್ದಿನ ಸಹೋದರಿ ಆತ್ಮಹತ್ಯೆ ಮಾಡಿಕೊಂಡಳು ಎಂಬ ತಂತಿ ವರ್ತಮಾನ ಬಂದಿತು. ಇದು ಸ್ವಾಮೀಜಿಗೆ ದೊಡ್ಡ ಆಘಾತವನ್ನುಂಟುಮಾಡಿತು.
ಈಗ ಸ್ವಾಮೀಜಿ ಬದರಿಕಾಶ್ರಮದಲ್ಲಿ ಸಾಧನೆ ಮಾಡಬೇಕೆಂದು ತೀರ್ಮಾನಿಸಿ ಹೊರಟರು ಆಗಲೂ ಗುರುಭಾಯಿ ಅನಾರೋಗ್ಯ ಅಡ್ಡಬಂತು. ಅವರ ಶುಶ್ರೂಷೆಗಾಗಿ ಡೆಹರಾಡೂನ್‌ಗೆ ತೆರಳಿದರು. ನಂತರ ಸ್ವಾಮೀಜಿ ಹೃಷಿಕೇಶಕ್ಕೆ ಬಂದರು. ಅಲ್ಲಿ ಕುಟೀರವೊಂದನ್ನು ಕಟ್ಟಿಕೊಂಡು ತಪಸ್ಸಾಧನೆಯಲ್ಲಿ ಮುಳುಗಿಬಿಡಲು ತೀರ್ಮಾನಿಸಿದರು. ಆದರೆ ದೈವೇಚ್ಛೆಯೇ ಬೇರೆಯಾಗಿತ್ತು. ಸ್ವತಃ ಸ್ವಾಮೀಜಿಯೇ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದರು. ಚೇತರಿಸಿಕೊಳ್ಳಲು ತುಂಬಾ ದಿನಗಳೇ ಹಿಡಿದವು.
ಹೀಗೆ ಸ್ವಾಮೀಜಿ ನಿರ್ವಿಕಲ್ಪ ಸಮಾಧಿಸ್ಥಿತಿಗೇರುವ ಹಂಬಲ ಕೊನೆಗೂ ಈಡೇರಲಿಲ್ಲ. ಪ್ರತಿಸಲ ಪ್ರಯತ್ನಿಸಿದಾಗಲೂ ಏನಾದರೊಂದು ಅಡ್ಡಿಯಾಗುತ್ತಿತ್ತು. ಇದಕ್ಕೆ ಕಾರಣ ಹಿಂದೆ ರಾಮಕೃಷ್ಣರು ಹೇಳಿದ್ದರು, 'ನಿನ್ನ ಈ ನಿರ್ವಿಕಲ್ಪ ಸಮಾಧಿಯ ಅನುಭವವನ್ನು ಪೆಟ್ಟಿಗೆಯಲ್ಲಿಟ್ಟುಬೀಗ ಹಾಕಲಾಗುತ್ತದೆ. ನೀನು ನಿನ್ನ ಪಾಲಿನ ಕಾರ್ಯವನ್ನು ಮಾಡಿ ಮುಗಿಸಿದ ಮೇಲಷ್ಟೇ ಆ ಬೀಗ ತೆರೆಯಲಾಗುತ್ತದೆ' ಎಂದು. ಈಗ ಸ್ವಾಮೀಜಿ ದೈವೇಚ್ಛೆಗೆ ತಲೆಬಾಗಿ ಕಾರ್ಯಸಾಧನೆಯನ್ನು ಹೊತ್ತು ದಿಲ್ಲಿಯತ್ತ ನಡೆದರು.

-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement