ಕಟುಕನ ಅಂಗಡಿಯಲ್ಲಿ ಬಸವನ ಪುರಾಣ ಹೇಳಿದರಂತೆ
ಪ್ರಾಣಿಗಳ ಪ್ರಾಣ ತೆಗೆದು, ಮಾಂಸ ಮಾರಿ ಬದುಕುವವನೇ ಕಟುಕ. ಅವನ ಹೃದಯದಲ್ಲಿ ಕರುಣೆ ಮನೆ ಮಾಡಿದ್ದರೆ ಆ ಕೆಲಸವನ್ನೇ ಮಾಡುತ್ತಿರಲಿಲ್ಲ. ಇನ್ನೊಬ್ಬರ ಮಧುರ ಭಾವನೆಗಳಿಗೆ ಸ್ಪಂದಿಸದೆ, ತಮ್ಮದೇ ಮೊಂಡುವಾದಕ್ಕೆ ಅಂಟಿಕೊಳ್ಳುವವರೂ ಕಟುಕರೇ. ಇಂತಹ ಕಠೋರ ಮನಸ್ಸಿನವರಿಗೆ ಕರುಣೆಯ ಪಾಠ ಫಲ ಕೊಡುವುದೇ?
-ಸಂಪಟೂರು