ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕರ್ತವ್ಯ!

Mainashree
Updated On : 21 Aug 2013, 12:42 pm

ಅದೊಂದು ಜನನಿಬಿಡ ಪ್ರದೇಶ. ಬೆಳ್ಳಂಬೆಳಗ್ಗೆ ಆ ಪ್ರದೇಶಕ್ಕೆ ನಾಲ್ಕಾರು ಜನರ ಗುಂಪೊಂದು ಹಾರೆ, ಪಿಕ್ಕಾಸಿ, ಗುದ್ದಲಿ ಹಿಡಿದು ಬಂದು, ರಸ್ತೆಯ ಬದಿಯಲ್ಲಿ ಗುಂಡಿ ತೆಗೆಯಲು ಪ್ರಾರಂಭಿಸಿದರು. ಅಷ್ಟರಲ್ಲಿ ಮತ್ತೊಂದು ಗುಂಪು ಬಂದು ಆ ಗುಂಡಿಯನ್ನು ಮುಚ್ಚಲು ತೊಡಗಿದರು! ಮೊದಲನೇ ತಂಡ ಗುಂಡಿ ತೋಡುತ್ತಾ ತೋಡುತ್ತಾ ಮುಂದುವರಿಯುತ್ತಿದ್ದರೆ... ಎರಡನೇ ತಂಡ ಆ ಗುಂಡಿಗಳನ್ನು ಮುಚ್ಚುತ್ತಾ ಹೋಗುತ್ತಿತ್ತು.
ಇದನ್ನು ಗಮನಿಸುತ್ತಿದ್ದ ನಾಗರಿಕರೊಬ್ಬರಿಗೆ ಆಶ್ಚರ್ಯವಾಯಿತು. ಈ ಜನ ಏನು ಮಾಡುತ್ತಿದ್ದಾರೆ? ಹೀಗೇಕೆ ಗುಂಡಿ ತೆಗೆಯುತ್ತಿದ್ದಾರೆ? ತೆಗೆದ ಗುಂಡಿಗಳನ್ನು ಈ ಎರಡನೇ ಗುಂಪಿನ ಜನ ಮುಚ್ಚುತ್ತಿರುವುದೇಕೆ?.. ಕುತೂಹಲ ತಡೆಯಲಾಗದೆ ಆ ಜನರನ್ನು ಕೇಳಿಯೇಬಿಟ್ಟರು.
ತೆಗೆದ ಗುಂಡಿಯನ್ನು ಮುಚ್ಚುತ್ತಿದ್ದ ಜನ ಹೇಳಿದರು, 'ನಾವು ವನಮಹೋತ್ಸವ ಆಚರಿಸುತ್ತಿದ್ದೇವೆ. ಗುಂಡಿ ತೆಗೆಯುವುದು ಆ ತಂಡದ ಕೆಲಸ. ಗಿಡ ನೆಡುವುದು ಮತ್ತೊಂದು ತಂಡದ ಕೆಲಸ. ನಂತರ ಗುಂಡಿ ಮುಚ್ಚುವುದು ನಮ್ಮ ತಂಡದ ಕೆಲಸ. ಈ ದಿನ ಗಿಡ ನೆಡುವವರು ರಜದಲ್ಲಿದ್ದಾರೆ. ಆದರೂ ನಾವು ನಮ್ಮ ಕರ್ತವ್ಯ ಮಾಡುತ್ತಿದ್ದೇವೆ...!'
- ಪಿ.ಜೆ. ರಾಘವೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments