ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಒಂದೇ ಬದುಕು

Lingaraj Badiger
Updated On : 23 Aug 2013, 6:45 am

ಭಾರತೀಯರಾದ ನಮಗೆ ಪುನರ್ಜನ್ಮದಲ್ಲಿ ನಂಬಿಕೆ. ಮತ್ತೆ ಮತ್ತೆ ಹುಟ್ಟಿ ಸಾಯುವ ಕರ್ಮಚಕ್ರದಲ್ಲಿ ಸಿಕ್ಕಿಬೀಳದಂತೆ ಏನು ಮಾಡಬೇಕು ಎಂಬ ಮೀಮಾಂಸೆಯನ್ನು ಯೋಗಿಗಳಿಗೆ ಬಿಡೋಣ. ನಮ್ಮ ನಿಮ್ಮ ಲೌಕಿಕದ ವಿಚಾರ ಮಾತಾಡೋಣ. ಆ ದೃಷ್ಟಿಯಿಂದ ನೋಡಿದರೆ ನಮಗಿರುವುದು ಒಂದೇ ಜನ್ಮ, ಹೌದು ತಾನೆ?

'ನಮಗೆ ಒಂದೇ ಬದುಕಿರುವುದು' ಎಂಬ ಮಾತು ನಿಮಗೆ ಭರವಸೆಯಂತೆ ಕೇಳಿಸುತ್ತದೋ ಅಥವಾ ದಿಗಿಲು ಉಕ್ಕಿಸುತ್ತದೋ? ಅದು ಹೇಗೆ ಕೇಳಿಸುತ್ತದೆ ಎಂಬುದರ ಮೇಲೆ ನಿಮ್ಮ ಸ್ವಭಾವ ನಿರ್ಧಾರವಾಗುತ್ತದೆ. ಅನೇಕ ಮಂದಿ ಕ್ಷಣಕ್ಷಣಕ್ಕೂ ಸಾಯುತ್ತಿರುತ್ತಾರೆ- ಹಿಂಜರಿಕೆಯಿಂದ, ಸೋಲಿನಿಂದ, ಅವಮಾನದಿಂದ. ಇನ್ನನೇಕರು ಒಂದೇ ಬದುಕಿನಲ್ಲಿ ಸಾವಿರ ಬಾಳನ್ನು ಬಾಳುತ್ತಾರೆ. ಶಿವರಾಮ ಕಾರಂತರು, ಸ್ಟೀವ್ ಜಾಬ್ಸ್, ಮಹಾತ್ಮ ಗಾಂಧಿ ಮುಂತಾದವರು ಇದಕ್ಕೆ ಉದಾಹರಣೆ.

ಪುನರ್ಜನ್ಮದಲ್ಲಿ ನಮಗಿರುವ ನಂಬಿಕೆಯಿಂದಾಗಿಯೇ ನಾವು ಈ ಜನ್ಮದಲ್ಲಿ ಮಾಡಬೇಕಾಗಿರುವುದನ್ನು ಮಾಡುವುದಿಲ್ಲ ಎಂಬ ಕೆಲ ಚಿಂತಕರ ಮಾತಿನಲ್ಲಿ ಹುರುಳಿದೆ. ಈ ಅವಕಾಶ ಬಿಟ್ಟರೆ ಇನ್ನಿಲ್ಲ ಎಂಬಂತೆ ಎಲ್ಲದರಲ್ಲೂ ತೊಡಗಿಕೊಳ್ಳುವುದೇ ನಮ್ಮ ಮೋಕ್ಷಕ್ಕಿರುವ ಏಕೈಕ ದಾರಿ. ಅಂದರೆ ಏಳು ತಲೆಮಾರಿಗಾಗುವಷ್ಟು ಸಂಪತ್ತು ಕೂಡಿಡಬೇಕೆಂದಲ್ಲ. ಸಾಧ್ಯವಿದ್ದಷ್ಟು ಜನರ ಬದುಕು ಹಸನಾಗಿಸಿ, ಮುಂದಿನ ತಲೆಮಾರಿಗೆ ಅನುಕೂಲವಾಗುವಂಥ ಪರಿಸರವನ್ನು ಸೃಷ್ಟಿಸಿಕೊಟ್ಟು, ಮುಂದಿನವರೂ ಅನುಸರಿಸುವಂಥ ಮಾರ್ಗವನ್ನು ಹಾಕಿಕೊಡುವುದೇ ಉತ್ತಮ ಜೀವನಪಥ. ಈತ ಇನ್ನೂ ಬದುಕಬೇಕಿತ್ತು ಎಂದು ನಮ್ಮ ನಂತರದವರಿಗೆ ಅನಿಸಬೇಕು. ನಮ್ಮ ಹೆಜ್ಜೆಗಳು ಸಮುದಾಯದ ಮೇಲೆ ಅಚ್ಚಳಿಯದಂತೆ ಬೀಳಬೇಕು. ನಿಮ್ಮ ಒಂದೇ ಬದುಕನ್ನು ಅರ್ಥಪೂರ್ಣವಾಗಿರುವಂತೆ ಬಾಳುತ್ತೀರೋ ಅಥವಾ ಎಲ್ಲದಕ್ಕೂ ಹಿಂಜರಿದು ಈ ಬಾಳನ್ನೇ ಅರ್ಧಕ್ಕೆ ಇಳಿಸಿಕೊಳ್ಳುತ್ತೀರೋ- ನಿರ್ಧಾರ ನಿಮಗೆ ಬಿಟ್ಟದ್ದು. ಅದು ಧನಾತ್ಮಕ ನಿರ್ಧಾರವಾಗಿರಲಿ ಅಷ್ಟೆ.

- ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments