ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಅಕ್ಷರದ ಅವಾಂತರ

Mainashree
Updated On : 25 Aug 2013, 1:27 am

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಜ್ಜ ಹಾಗೇ ಶಾಲೆ ಕಡೆ ಬಂದಿದ್ದ. ಎರಡನೇ ತರಗತಿಯಲ್ಲಿ ಪಾಠ ನಡೆಯುತ್ತಿತ್ತು. ಪಾಠ ಮಾಡುತ್ತಿದ್ದವರು ರಾಧಿಕಾ ಮೇಡಂ. ಪಾಪ, ಅವರಿಗೆ 'ರ' ಅಕ್ಷರ ಹೇಳೋಕೇ ಬರ್ತಿರಲಿಲ್ಲ. ಅವರ ನಾಲಿಗೆ ಅದನ್ನು 'ಲ' ಎಂದೇ ಹೇಳುತ್ತಿತ್ತು.
'ಮಕ್ಕಳೇ ಎಲ್ಲಲೂ ಸಲಿಯಾಗಿ ಬಲೆದುಕೊಳ್ಳಿ. ಬಲಶಾಲಿ ಎಂದಲೆ ವೀಲ-ಧೀಲ-ಶೂಲ, ಯಾವುದಕ್ಕೂ ಹೆದಲದವನು ಎಂದಲ್ಥ...' ಇದನ್ನು ಕೇಳಿದ ರಾಮಜ್ಜನಿಗೆ ಸಿಟ್ಟು ನೆತ್ತಿಗೇರಿತು. ನೇರ ಹೆಡ್‌ಮಾಸ್ತರರ ಕೊಠಡಿಗೆ ಹೋಗಿ ಮೇಡಂ ಬಗ್ಗೆ ದೂರು ಹೇಳಿದ. ಹೆಡ್‌ಮಾಸ್ತರರಿಗೂ ಅಪಾರ ಸಿಟ್ಟು ಬಂದಿತು.
'ಹೌದೆ? ಇಂಥವಲು ಬಂದು ಕೆಲಸಕ್ಕೆ ಸೇಲಿಬಿಡ್ತಾರೆ ಸಲ್, ಏನು ಮಾಡುವುದು? ನಮ್ಮ ತಲೆ ತಿಂತಾಲೆ. ನಾನು ಅವಲಿಗೆ ಹೇಳ್ತೀನಿ ಲಾಮಜ್ಜಲೇ..' ಎಂದರು. ರಾಮಜ್ಜನಿಗೆ ತಲೆಯಿಂದ ಉಂಗುಷ್ಠದವರೆಗೆ ಉರಿದುಹೋಯಿತು. ಸೀದಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಬಳಿ ಹೋಗಿ ಮೇಡಂ ಹಾಗೂ ಹೆಡ್‌ಮಾಸ್ತರರ ಬಗ್ಗೆ ವಿವರಿಸಿ 'ಇಂಥವರಿಂದ ಕಲಿತ ಮಕ್ಕಳು ಅದು ಹೇಗೆ ಉದ್ಧಾರವಾಗೋದು?' ಎಂದು ಪ್ರಶ್ನಿಸಿದ.
ಶಿಕ್ಷಣಾಧಿಕಾರಿಗಳಿಗೂ ನಖಶಿಖಾಂತ ಕೋಪ ಉಕ್ಕಿ ಹರಿಯಿತು. 'ಸಾಲ್, ನೀವೇನೂ ಯೋಚನೆ ಮಾಡಬೇಡಿ. ನಾನಿವತ್ತೇ ಉಗ್ಲ ಕ್ಲಮ ತಗೋತೀನಿ...' ಎಂದರು.
ಮರುಕ್ಷಣ ರಾಮಜ್ಜ ಪ್ರಜ್ಞೆತಪ್ಪಿ ಬಿದ್ದುಬಿಟ್ಟ.
- ಕೆ. ಶ್ರೀನಿವಾಸರಾವ್,
ಹರಪನಹಳ್ಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments