ಸ್ವಾಮೀಜಿಯ ಧೀರ ಗಂಭೀರ ವ್ಯಕ್ತಿತ್ವ
ಸ್ವಾಮಿ ವಿವೇಕಾನಂದರನ್ನು ಭೇಟಿ ಮಾಡಲು ಬಂದ ಮಹಾರಾಜ ಮಂಗಳಸಿಂಗ್ ಕುಶಲೋಪಚಾರದ ನಂತರ ತಮ್ಮ ಪ್ರಶ್ನೆಯನ್ನು ಮುಂದಿಟ್ಟನು. 'ಸ್ವಾಮೀಜಿ, ನನಗೆ ಮೂರ್ತಿಪೂಜೆಯಲ್ಲಿ ನಂಬಿಕೆಯಿಲ್ಲ, ನನ್ನ ಗತಿ ಏನಾಗಬಹುದು?' ಸ್ವಾಮೀಜಿಯು 'ಏನೂ ಆಗುವುದಿಲ್ಲ. ಪ್ರತಿಯೊಬ್ಬನೂ ತನ್ನ ನಂಬಿಕೆಗೆ ಅನುಗುಣವಾಗಿ ಧಾರ್ಮಿಕ ಆದರ್ಶಗಳನ್ನು ಅನುಸರಿಸಬೇಕು ಎಂಬುದು ನನ್ನ ನಂಬಿಕೆ' ಎಂದುತ್ತರಿಸಿದ ಮರುಕ್ಷಣವೇ ಗೋಡೆಯ ಮೇಲಿದ್ದ ಮಹಾರಾಜರ ಭಾವಚಿತ್ರವನ್ನು ಕೆಳಗಿಳಿಸುವಂತೆ ಮಂತ್ರಿಗೆ ಹೇಳಿದರು. 'ಇದರ ಮೇಲೆ ಉಗುಳು!' ಎಂದರು. ಮಂತ್ರಿ ಅವಾಕ್ಕಾಗಿ ನಿಂತುಬಿಟ್ಟ. ಅಲ್ಲಿದ್ದವರೆಲ್ಲ ಭಯದಿಂದ ನಡುಗಿದರು. 'ನಿಮ್ಮಲ್ಲಿ ಯಾರಾದರೂ ಸರಿ, ಇದರ ಮೇಲೆ ಉಗುಳಬಹುದು. ಇದೊಂದು ಕಾಗದದ ಚೂರಲ್ಲವೆ? ಇದರ ಮೇಲೆ ಉಗುಳಲು ಅಭ್ಯಂತರವೇನಿದೆ? ಉಗುಳಿ ಇದರ ಮೇಲೆ!'
'ಇದೇನು ಸ್ವಾಮೀಜಿ ನೀವು ಹೇಳುತ್ತಿರುವುದು. ಇದು ನಮ್ಮ ಮಹಾರಾಜರ ಭಾವಚಿತ್ರ' ಎಂದು ಮಂತ್ರಿ. ಸ್ವಾಮೀಜಿ ಗಂಭೀರವಾಗಿ ಹೇಳಿದರು, 'ಈ ಭಾವಚಿತ್ರದಲ್ಲಿ ನೀವು ಮಹಾರಾಜರ ಛಾಯೆಯನ್ನು ಕಾಣುತ್ತಿದ್ದೀರಿ. ಈ ಭಾವಚಿತ್ರದ ಮೇಲೆ ಉಗುಳಿದರೆ ನಿಮ್ಮ ಮಹಾರಾಜರ ಮೇಲೆಯೇ ಉಗುಳಿದಂತೆ ಎಂದು ನಿಮ್ಮ ಭಾವನೆ. ಮಹಾರಾಜ, ಈ ಭಾವಚಿತ್ರ ಒಂದು ದೃಷ್ಟಿಯಿಂದ ನೀನೇ. ನಿನ್ನ ನಿಷ್ಠಾವಂತ ಸೇವಕರು ಇದರಲ್ಲಿ ನಿನ್ನ ವ್ಯಕ್ತಿತ್ವವನ್ನು ಕಾಣುತ್ತಾರೆ. ದೇವದೇವಿಯರ ವಿಗ್ರಹಗಳನ್ನು ಪೂಜಿಸುವ ಭಕ್ತರ ವಿಷಯದಲ್ಲಿಯೂ ಹೀಗೆಯೇ. ಭಗವಂತ ಅವರವರ ತಿಳಿವಳಿಕೆ ಹಾಗೂ ಭಾವನೆಗಳಿಗೆ ಅನುಗುಣವಾಗಿ ಕಾಣಿಸಿಕೊಳ್ಳುತ್ತಾನೆ.'
-ಆನಂದ ಎಸ್.ಎನ್.