ಅತ್ತೆ ಒಡೆದ ಮಡಕೆ ಸೀಳು, ಸೊಸೆ ಒಡೆದ ಮಡಕೆ ಹೊಸತು
ಇನ್ನೊಬ್ಬರು ಮಾಡುವ ಎಲ್ಲ ಕೆಲಸಗಳಲ್ಲೂ ಒಡಕು ಹುಡುಕುವ ಮಂದಿಗೆ ಈ ಗಾದೆ ಚೆನ್ನಾಗಿ ಒಪ್ಪುತ್ತದೆ. ಘಟವಾಣಿ ಅತ್ತೆ ಹೊಸ ಮಡಕೆಯನ್ನು ಒಡೆದು ಹಾಕಿದರೂ, ಅದು ಮೊದಲೇ ಸೀಳಿತ್ತು ಎನ್ನಬಲ್ಲಳು. ಜಗಳವರಿಯದ ಸೊಸೆ ತೂತು ಮಡಕೆ ಒಡೆದರೂ ಬೈಗಳು ತಿನ್ನಲೇಬೇಕು.
- ಸಂಪಟೂರು