ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕೃಷ್ಣ ಕವಿತೆಗಳು

Lingaraj Badiger
Updated On : 27 Aug 2013, 3:40 am

ಶಂಕೆ
ಹಲವು
ಹೆಂಗಳೆಯರ
ಜತೆ
ಹೊಂದಿದ್ದಕ್ಕೆ 'ಕ್ರಷ್‌'ನ,
ಅವನಾದನೇ 'ಕೃಷ್ಣ'?

ರಸ್ತೆ
'ಕರ್ಮಣ್ಯೇ
ವಾಧಿಕಾರಸ್ಥೆ
ಮಾಫಲೇಶು
ಕದಾಚನ'
ಅಂತ ಕೃಷ್ಣ ಅಂದಿದ್ದು
ನೆನಪಿಸಿಕೊಂಡು
ಅಂದು
ಕೆಲಸದಲ್ಲಿ ತೊಡಗಿದೆ,
ಫಲ ನಿರೀಕ್ಷಿಸಲೇ ಇಲ್ಲ;
ಇಂದು
ಫಲವಿಲ್ಲದೇ ಕುಳಿತಿರುವೆ,
ಕೃಷ್ಣ ಅಂದಿದ್ದು ನೆನಪಾಗುತ್ತಿದೆ,
ಅದೇ 'ಯದ್ಭಾವಂ ತದ್ಭವತಿ'...
ಗೋಪಿಕೆ
ಸ್ತ್ರೀಲೋಲನೆಂದು
ನಿಂದಿಸುವ
ಜನರ ಮುಂದೆ,
ಕರೆಸಿಬಿಡು ಹರಿ
ಗೋಪಿಕೆಯೊಬ್ಬಳ ಇಂದೇ;
ನೋಡು
ನಿಂದಿಸುವವರು ಕೂಡ,
ಸುಳಿದಾಡುವರು
ಅವಳ ಹಿಂದೆ ಮುಂದೆ...
ರಾಧೆ
ಮಾಧವ,
ಹದಿನಾರು ಸಾವಿರ
ಗೋಪಿಕೆಯರನು
ಮದುವೆಯಾದವ,
ನನ್ನೂ ಲಗ್ನವಾದರೇನು ಬಾಧೆ?
ಕ್ಷಮಿಸು..
ನಂಗಿಲ್ಲ ಆ ಇರಾದೆ,
ಭಗ್ನಗೊಳಿಸದೆ
ನನ್ನಾಸೆ
ಹರಿಸು ನಿನ್ನೊಲವ ಸುಧೆ
ಒಂದಿನಿತು ನನ್ನತ್ತ,
ಸಾಕು ಸಂತೃಪ್ತಳು ಈ ರಾಧೆ...
-ರವಿಕಾಂತ ಕುಂದಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement