ಸೂಜಿ ಮತ್ತು ದಾರ
ಸರ್ವಸಿದ್ಧಿಗೂ ಪ್ರಸನ್ನ ಮನಸ್ಸೇ ಕಾರಣವೆನ್ನುವ ಮಾತಿದೆ. ಪ್ರಸನ್ನತೆಯ ದಾರ ಸೂಜಿಯೆನ್ನುವ ಮನಸ್ಸಿನೊಳಗೆ ನಿಧಾನವಾಗಿ ಪ್ರವೇಶಿಸಿದಾಗಲೇ ಪ್ರೀತಿಯ, ನಗುವಿನ ಹೊಲಿಗೆ ಸಾಧ್ಯವಾಗುತ್ತದೆ.
ಹೊಲಿಗೆಯಿಲ್ಲದ ಬಟ್ಟೆಗೆ ಆಕಾರವೆಂಬುದೇ ಇರುವುದಿಲ್ಲ.ಹೊಲಿಗೆಯಿಲ್ಲದೆ ಬಟ್ಟೆ ಅಂಗಿಯಾಗುವುದಿಲ್ಲ. ನಮ್ಮ ಮೈಯನ್ನು ಸುಂದರವಾಗಿ ಮುಚ್ಚಿಕೊಳ್ಳುವುದಿಲ್ಲ ಮತ್ತು ಕನಿಷ್ಠ ನಾಗರಿಕತೆಯೂ ಮೈಗೂಡುವುದಿಲ್ಲ. ಹೊಲಿಗೆ ಕಂಡೂ ಕಾಣದಂತೆ ಒಟ್ಟು ಬಟ್ಟೆಯಲ್ಲಿ ಲೀನವಾದಾಗ ಸೌಂದರ್ಯ ಹೆಚ್ಚುತ್ತದೆ. ಇದಕ್ಕೆ ಸೂಜಿ, ದಾರ ಮತ್ತು ಹೊಲಿಗೆಯ ಕೌಶಲವೇ ಕಾರಣ. ಈ ಮೂರರ ತ್ರಿವೇಣಿ ಸಂಗಮವಾಗಬೇಕು. ಅಂಥ ಪವಿತ್ರ ಸಂಗಮದಲ್ಲಿ ಹಾಕುವ ಮುಳುಗು ಸಮಾಜದ ಆರೋಗ್ಯವನ್ನು ಹೆಚ್ಚಿಸುತ್ತದೆ.
ಎಲ್ಲೆಲ್ಲಿ ಭೇದಭಾವದ ತೇಪೆಯಿದೆಯೋ, ಎಲ್ಲೆಲ್ಲಿ ಅತ್ಯಾಚಾರ, ಅನಾಚಾರದ ಪಿಡುಗಿದೆಯೋ, ಎಲ್ಲೆಲ್ಲಿ ಭ್ರಷ್ಟಾಚಾರ ಹಾಸು ಹೊಕ್ಕಾಗಿದೆಯೋ ಅಲ್ಲೆಲ್ಲಾ ಪ್ರೀತಿ ಮತ್ತು ಸಹಾನೂಭೂತಿಯ ಸೂಜಿ ಮತ್ತು ದಾರ ಬೇಕೇಬೇಕಲ್ಲವೆ?
-(ಸಂಗ್ರಹ) ಬ್ರಹ್ಮಣಿ ಪಿ. ರಾವ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.