ದೂತಿಪ್ರಸಂಗ
ತಮ್ಮ ಪ್ರಣಯ ಪ್ರಕರಣಗಳನ್ನು ಫಲ ನೀಡುವಂತೆ ಮಾಡಲು ದೂತ- ದೂತಿಯರನ್ನು ಉಪಯೋಗಿಸುವುದು ಅಂದಿಗೂ, ಇಂದಿಗೂ ನಡೆಯುವ ವಿದ್ಯಮಾನ. ಹಾಗೆ ತನ್ನ ಪ್ರಿಯಕರನನ್ನು ಕಂಡುಬರಲು ಸಖಿಯನ್ನು ಕಳುಹಿಸಿದ್ದಾಳೆ ರಾಜಕುಮಾರಿ. ಆಕೆ ಬಂದ ನಂತರ ಅವರಿಬ್ಬರಲ್ಲಿ ನಡೆಯುವ ಸಂಭಾಷಣೆ ಹೀಗಿದೆ: (ಕಂಸದೊಳಗಿರುವುದು ಸಖಿಯ ಉತ್ತರ)
ಸ್ವಿನ್ನಂ ಕೇನ ಮುಖಂ ದಿವಾಕರಕರೈಸ್ತೇ
ರಾಗಿಣೀ ಲೋಚನೇ ರೋಷಾತ್ತ ದ್ವಚನೋದಿತಾದ್ವಿಲುಲಿತಾ
ನೀಲಾಲಕಾ ವಾಯುನಾ
ಭ್ರಷ್ಟಂ ಕುಂಕುಮಮುತ್ತರೀಯಕಷಣಾತ್
ಕ್ಲಾಂತಾಸಿ ಗತ್ಯಾಗತೈರ್
ಉಕ್ತಂ ತತ್ಸಕಲಂ ಕಿಮತ್ರ ವದ ಹೇ ದೂತಿ! ಕ್ಷತಸ್ಯಾಧರೇ?
ಸಖಿ, ಮುಖವೇಕೆ ಬಳಲಿದೆ? (ಬಿಸಿಲಿನ ತಾಪದಿಂದ)
ನಯನಗಳೇಕೆ ಕೆಂಪಾಗಿವೆ? (ಆ ಒರಟನ ಮಾತುಗಳನ್ನು ಕೇಳಿ ಸಿಟ್ಟಾದೆ)
ತಲೆಕೂದಲೇಕೆ ಕೆದರಿಕೊಂಡಿದೆ? (ಅದು ಗಾಳಿಗೆ ಹರಡಿದ್ದು)
ಕುಂಕುಮವೇಕೆ ಉಜ್ಜಿಹೋಗಿದೆ? (ಶಾಲಿನಿಂದ ಉಜ್ಜಿಕೊಂಡೆನಲ್ಲ!)
ಶರೀರವೇಕೆ ಬಳಲಿದೆ? (ನಡೆದು ಹೋಗಿ ಬಂದು ಸುಸ್ತಾದೆ)
ದೂತಿ! ನಿನ್ನ ಮಾತೆಲ್ಲ ನಂಬಲೆ? ನಿನ್ನ ತುಟಿಗಳ ಮೇಲೆ ಹಲ್ಲಿನಿಂದ ಕಚ್ಚಿದ ಗುರುತಿದೆಯಲ್ಲ, ಅದೇನದು? (.........?)
ದೂತಿ- ಪ್ರಿಯಕರನ ಮಧ್ಯೆ ಏನು ನಡೆದಿದ್ದಿರಬಹುದೆಂಬುದನ್ನು ಜಾಣರಾದ ವಾಚಕರು ಈಗಾಗಲೇ ಊಹಿಸಿರಬಹುದು. ಇದು ಇಂದಿನ ಪ್ರಣಯಿ- ಪ್ರಣಯಿನಿಯರಿಗೂ ಪಾಠ. ಹುಷಾರ್, ಅತಿಜಾಣ್ಮೆಯ ಸುಂದರ- ಸುಂದರಿಯರನ್ನು ನಿಮ್ಮ ದೂತರನ್ನಾಗಿ ನೇಮಿಸಿಕೊಳ್ಳಬೇಡಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.