ಲಿಮ್ಕಾ ಆನೆ
1050 ಆನೆಗಳು. ಒಂದರಂತೆ ಇನ್ನೊಂದಿಲ್ಲ. ಕಲಾವಿದ ಶ್ರೀಧರ್ ಎಸ್. ಅವರ ಈ ಕಲಾಕೃತಿಗಳು ಲಿಮ್ಕಾ ದಾಖಲೆ ಪುಸ್ತಕ ಸೇರಿವೆ. ಸೀಮೆಸುಣ್ಣದಲ್ಲಿ ಆನೆಗಳ ಕಲಾಕೃತಿ ಬಿಡಿಸಿ ಅವುಗಳ ಮೂಲಕ 'ಪರಿಸರ ನಾಶ ತಡೆ ಹಾಗೂ ಆನೆಗಳ ಸಂರಕ್ಷಣೆ' ಜಾಗೃತಿ ಮೂಡಿಸುವುದು ಶ್ರೀಧರ್ ಉದ್ದೇಶ.
ಶ್ರೀಧರ್ ವೃತ್ತಿಯಲ್ಲಿ ಕಲಾಶಿಕ್ಷಕರು. ಗ್ರಾಮೀಣ ವಿದ್ಯಾರ್ಥಿಗಳಿಗೆ ಕಲೆ ತರಬೇತಿ ನೀಡುತ್ತಿದ್ದಾರೆ. 1050 ಆನೆಗಳ ಆಕೃತಿಯನ್ನು ಸೀಮೆಸುಣ್ಣದಲ್ಲಿ ರಚಿಸಿ 2013ರ ಲಿಮ್ಕಾ ದಾಖಲೆ ಪಟ್ಟಿಯಲ್ಲಿ ಸೇರಿದ್ದಾರೆ. ಸೀಮೆಸುಣ್ಣದಲ್ಲಿ ಕೇವಲ 6 ನಿಮಿಷದಲ್ಲಿ ಆನೆ ರಚಿಸಬಲ್ಲರು. ಏಳು ವಿವಿಧ ಬಣ್ಣದ ಸೀಮೆಸುಣ್ಣ ಬಳಸುತ್ತಾರೆ.
ಇವರ ಇನ್ನೊಂದು ಪ್ರತಿಭೆ, ಹಲವು ದೇಶಗಳ ನೋಟು, ಅಂಚೆಚೀಟಿಗಳನ್ನು ಚಿತ್ರದ ಮೂಲಕವೇ ರಚಿಸುವುದು. 2007ರಲ್ಲಿ ಇದೂ ಲಿಮ್ಕಾ ದಾಖಲೆ ಸೇರಿದೆ. ವಿಸಿಟಿಂಗ್ ಕಾರ್ಡ್ನಲ್ಲಿ ಲೆನ್ಸ್ಬಳಸದೆ 63 ಚಿತ್ರ, ನಿಸರ್ಗಚಿತ್ರ, ವ್ಯಂಗ್ಯಚಿತ್ರ, ವ್ಯಕ್ತಿಚಿತ್ರ, ಗ್ರೀಟಿಂಗ್ಸ್ ಬರೆದು ಕೈಚಳಕ ತೋರಿದ್ದಾರೆ. ದಸರಾ ಪ್ರಶಸ್ತಿ, ಗುರು ಪುರಸ್ಕಾರ ಪ್ರಶಸ್ತಿಗಳು ಇವರಿಗೆ ಸಂದಿವೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.