ಹಳ್ಳಿ ದೇವತೆ
ಬಹಳ ಹಿಂದೆ ದೂರದೇಶದ ಒಂದು ಹಳ್ಳಿಯಲ್ಲಿ ಒಬ್ಬ ಕ್ರೂರಿ ಜಮೀನ್ದಾರನಿದ್ದ. ತನ್ನ ದರ್ಪ ದೌಲತ್ತುಗಳಿಂದ ಪ್ರಜೆಗಳನ್ನು ಬೆಕ್ಕು, ಇಲಿಯನ್ನಾಡಿಸುವಂತೆ ಆಡಿಸುತ್ತಿದ್ದ. ಒಂದು ಸಲ ಭೀಕರ ಬರಗಾಲ ಬಂತು. ಹಳ್ಳಿಯ ಜನ ಉಪವಾಸದಿಂದ ತತ್ತರಿಸುತ್ತಿದ್ದರು. ಇಂಥ ಸಮಯದಲ್ಲಿ ಇದ್ಯಾವುದನ್ನೂ ಲೆಕ್ಕಿಸದೆ ಕೈಯಲ್ಲಿ ಚಾಬೂಕು ಹಿಡಿದು ಕಂದಾಯ ವಸೂಲಿಗೆ ಹೊರಟ.
ಅವನ ಹೆಂಡತಿ ದಯಾಮಯಿ. ಪ್ರಜೆಗಳನ್ನು ತನ್ನ ಮಕ್ಕಳಂತೆಯೇ ಪ್ರೀತಿಸುತ್ತಿದ್ದಳು. ಈ ಸಲ ಪ್ರಜೆಗಳ ಕಂದಾಯ ಮಾಫಿ ಮಾಡಿ ಎಂದು ಗಂಡನಲ್ಲಿ ಗೋಗರೆದಳು.
ಕ್ರೂರಿ ಗಂಡ ಒಂದು ಭಯಂಕರ ಷರತ್ತನ್ನು ಒಡ್ಡಿದ. ಅದೇನೆಂದರೆ, ಹೆಂಡತಿ ಹಳ್ಳಿಯ ಬೀದಿ ಬೀದಿಗಳನ್ನೂ ನಗ್ನಳಾಗಿ ಸುತ್ತಿ ಬರಬೇಕು. ಆಗ ಮಾತ್ರ ತಾನು ಕಂದಾಯ ಮಾಫಿ ಮಾಡುವುದಾಗಿ ಹೇಳಿದ. ಅವರ ಸಾವು, ನೋವುಗಳ ಮುಂದೆ ಇದೇನೂ ಹೆಚ್ಚಲ್ಲ ಎಂದು ಅವನ ಷರತ್ತಿಗೆ ಒಪ್ಪಿಕೊಂಡಳು. ಮಾರನೆಯ ದಿನ ಹಳ್ಳಿಯಲ್ಲೆಲ್ಲ ಡಂಗೂರ ಹೊಡೆಸಲಾಯಿತು. ಇದನ್ನು ಕೇಳಿದ ಜನ ಬೆಚ್ಚಿಬಿದ್ದರು. ತಮ್ಮ ಒಡತಿಯ ದುಃಸ್ಥಿತಿಗೆ ಮರುಗಿದರು. ಮರುದಿನ ತಮ್ಮ ಒಡತಿ ಬೀದಿಯಲ್ಲಿ ಬಂದಾಗ ಇಡೀ ಬೀದಿ ನಿರ್ಜನವಾಗಿರುವಂತೆ ನೋಡಿಕೊಂಡರು. ಜಮೀನ್ದಾರನ ಹೆಂಡತಿ ಗಂಡನ ಷರತ್ತಿನಲ್ಲಿ ಗೆದ್ದಳು. ಹೆಣ್ಣಿನ ಹಿರಿಮೆ ಇರುವುದೇ ಇಂಥ ಪ್ರೇಮ, ತ್ಯಾಗಗಳಲ್ಲಿ.
= ಬ್ರಹ್ಮಣಿ ಪಿ. ರಾವ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.