ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಅಪ್ಪನಂತಾಗಬೇಡ!

Mainashree
Updated On : 30 Aug 2013, 3:12 am

ಅಮ್ಮ ಅಪ್ಪನನ್ನು ವೃದ್ಧಾಶ್ರಮಕ್ಕೆ ಬಿಟ್ಟು ಕಾಲಿಗೆರಗಿದ ಮಗನಿಗೆ ಮುದಿ ಜೀವ ಹರಸಿತು ಪ್ರೀತಿಯಿಂದ ಕಣ್ಣು ತುಂಬಿ. ಮಗನ ಕಾರು ಮುಂದಕ್ಕೋಡಿದಂತೆ ಆ ಮುದಿ ಜೀವದ ಮನಸು ಮನಸ್ಸು 30 ವರ್ಷಗಳ ಹಿಂದಕ್ಕೆ ಓಡೀತು.
ಆ ದಿನ ನಮ್ಮ ಸಂತೋಷಕ್ಕೆ ಮೀತಿಯೇ ಇರಲಿಲ್ಲ. ಮಗ ಹುಟ್ಟಿದ ಸಂತೋಷದಲ್ಲಿ ಸಿಹಿ ಹಂಚಿ ಸಂಭ್ರಮಿಸಿದ್ದು. ಮೊದಲ ಬಾರಿ ಮಗ ಶಾಲೆಗೆ ಸೇರಿದಾಗ ಖುಷಿ, ಗಾಭರಿ. ಕಾಲೇಜಿಗೆ ಸೇರಲು ದೂರ ಹೋದಾಗಂತೂ ಅಳುವೇ ಬಂದುಬಿಟ್ಟಿತು. ಎಂಜಿನಿಯರ್ ಆಗಿ, ಒಳ್ಳೆ ಕೆಲಸ ಸಿಕ್ಕಿದಾಗ ಸ್ವರ್ಗಸುಖದ ಅನುಭವ.
ಮಗನಿಗೆ ಮದುವೆಯಾಯಿತು. ಮುದ್ದಾದ ಮೊಮ್ಮಗ ಹುಟ್ಟಿದ. ಮೊಮ್ಮಗುವಿಗೆ 3 ವರ್ಷವಾಗುವಷ್ಟರಲ್ಲಿ ಮಗ-ಸೊಸೆ ವರ್ತನೆಯಲ್ಲಿ ಬದಲಾವಣೆ. ಏನು ಮಾಡಿದ್ರೂ ತಪ್ಪು. ಒಂದು ಸಂಜೆ ಮಗ ಆಫೀಸಿನಿಂದ ಬಂದವನೇ 'ಅಮ್ಮ-ಅಪ್ಪ, ನನಗೆ ದೂರದೂರಿಗೆ ವರ್ಗವಾಗಿದೆ. ನಿಮ್ಮನ್ನು ಕರ್ಕೊಂಡು ಹೋಗಲಾಗುವುದಿಲ್ಲ. ಅದಕ್ಕಾಗಿ ಈ ತೀರ್ಮಾನ' ಎಂದ. ತಲೆ ಮೇಲೆ ಪರ್ವತವೇ ಬಿದ್ದಂತಾಯಿತು. 'ಇಂದಿನ ನಿದ್ದೆಯೇ ನಮ್ಮ ಕೊನೆಯ ನಿದ್ದೆಯಾಗಲಿ' ಎಂದು ಮನಸ್ಸು ಪ್ರಾರ್ಥಿಸಿತು. ರಾತ್ರಿ ಕಳೆದು ಬೆಳಗೂ ಆಯಿತು.
ಮನೆಯಿಂದ ಹೊರಡುವಾಗ ಆ ನೊಂದ ಹೃದಯ ಹರಸಿತು ಮೊಮ್ಮಗನಿಗೆ 'ಸದಾ ಸುಖವಾಗಿರು. ನೀನು ನಿನ್ನ ಅಪ್ಪನಂತಾಗಬೇಡ ಕಂದಾ'.

= ಸುನಂದಾ ಪುತ್ರನ್, ಬಹರೇನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments