ತಿಮಿಂಗಿಲ
ಸಿಟೇಶನ್ಸ್ ಗುಂಪಿಗೆ ಸೇರಿದ ತಿಮಿಂಗಿಲಗಳು ಸಸ್ತನಿಗಳಾಗಿದ್ದರೂ ಮತ್ಸ್ಯಗಳನ್ನು ಹೋಲುವ ರೂಪ ಪಡೆದಿವೆ. ನೀರಿನಲ್ಲೇ ಅವುಗಳ ವಾಸ.
ಸಿಟೇಶನ್ಸ್ ಗುಂಪಿಗೆ ಸೇರಿದ ತಿಮಿಂಗಿಲಗಳು ಸಸ್ತನಿಗಳಾಗಿದ್ದರೂ ಮತ್ಸ್ಯಗಳನ್ನು ಹೋಲುವ ರೂಪ ಪಡೆದಿವೆ. ನೀರಿನಲ್ಲೇ ಅವುಗಳ ವಾಸ.
ಸುಮಾರು 30 ರಿಂದ 40 ನಿಮಿಷಕ್ಕೊಮ್ಮೆ ಉಸಿರೆಳೆದುಕೊಳ್ಳುವ ಮೊದಲು ತಿಮಿಂಗಿಲಗಳು ಹೊರಬಿಡುವ ಉಸಿರು ಕಡಲಲ್ಲಿ ಕಾರಂಜಿಗಳಲ್ಲೇ ಸೃಷ್ಟಿಸುತ್ತವೆ!
ತಿಮಿಂಗಿಲಗಳು ಮಾಂಸಕ್ಕಾಗಿ ಮಾನವರಿಂದ ಕ್ರೂರವಾಗಿ ಸಾವಿಗೀಡಾಗುತ್ತಿವೆ. ಕಡಲ ಮಾಲಿನ್ಯ ಕೂಡ ಇದರ ಸಂತತಿ ನಶಿಸುವುದಕ್ಕೆ ಕಾರಣ.
ನೀಲಿ ತಿಮಿಂಗಿಲ
ಈವರೆಗೆ ತಿಮಿಂಗಿಲಗಳಲ್ಲಿ ಸುಮಾರು 80 ಪ್ರಭೇದಗಳನ್ನು ಗುರುತಿಸಲಾಗಿದೆ. 'ಬಲೀನ್ ಮತ್ತು ಹಲ್ಲಿನ ತಿಮಿಂಗಿಲಗಳು ಎಂಬ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
ಧರೆಯ ಅತ್ಯಂತ ದೊಡ್ಡ ಗಾತ್ರದ ಪ್ರಾಣಿ ಎಂಬ ದಾಖಲೆಯ ನೀಲಿ ತಿಮಿಂಗಿಲದ್ದಂತೂ ಕಲ್ಪನಾತೀತ ತೂಕ. ಅದರ ತೂಕ 100 ಟನ್ ಮೀರುತ್ತದೆ!
ಒಂದುಬಾರಿಗೆ 1000 ಲೀ. ನೀರನ್ನು ಬಾಯಲ್ಲಿ ತುಂಬಿಕೊಂಡು ಬಲೀನ್ ಮೂಲಕ ನೀರನ್ನು ಸೋಸಿ ಹೊರಹರಿಸಿದಾಗ ಬಾಯೊಳಗೆ ಉಳಿಯುವ ಜೀವಿಗಳನ್ನು ನುಂಗುತ್ತವೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.