ಬೈಟು ಕಾಫಿ ಪರಿಮಳಕ್ಕೆ ಸಾಟಿ ಇಲ್ಲ
ನನ್ನ ದಿನಚರಿ ಪ್ರಾರಂಭವಾಗುವುದು ಪತ್ರಿಕೆಗಳನ್ನು ಕೊಂಡು ಓದುವುದರಿಂದ. 'ಕನ್ನಡ ಪ್ರಭ'ದ 'ಬೈಟು ಕಾಫಿ' ಪ್ರಾರಂಭವಾದಾಗಿನಿಂದ ಇಂದಿನವರೆಗೂ ಎಲ್ಲಾ ಬೈಟು ಕಾಫಿ ಪ್ರತಿಗಳು ನನ್ನ ಸಂಗ್ರಹಾಲಯದಲ್ಲಿ ಬಿಗ್ ಕಾಫಿಗಳಾಗಿವೆ! ಸಮಯ ಸಿಕ್ಕಾಗಲೆಲ್ಲಾ ಫುಲ್ ಹಾಟ್, ಫುಲ್ ಸ್ವಾದದ ಕಾಫಿಯ ಪರಿಮಳದ ಸೊಗಸನ್ನು ಅನುಭವಿಸುತ್ತೇನೆ. ಓದುಗರ ಹಲವು ಅಂಕಣಗಳು ಪತ್ರಿಕೆ ಇನ್ನೂ ಹೆಚ್ಚು ಪ್ರಸಿದ್ಧಿಯಾಗಲು ಕಾರಣವಾಗಿದೆ. 'ಪದಸ್ಪರ್ಶ, ಜಗುಲಿ' ಇನ್ನಿತರ ಓದುಗರ ಅಂಕಣಗಳು ಪತ್ರಿಕೆ ಬರುವುದನ್ನೇ ಕಾಯುವಂತೆ ಮಾಡುತ್ತಿವೆ. ಅದರಲ್ಲೂ ಓದುಗರೇ ಬರಹಗಾರರಾಗುವ ಸದಾವಕಾಶ ಕಲ್ಪಿಸಿದೆ ಕನ್ನಡಪ್ರಭ. ನಾಲ್ಕು ಪುಟಗಳೂ ಒಂದಲ್ಲಾ ಒಂದು ರೀತಿಯಲ್ಲಿ ಕಾಫಿಯ ಪರಿಮಳ ಸೂಸುತ್ತವೆ. ಚಿತ್ರಗಳು, ಲೇಖನಗಳು ಎಲ್ಲವೂ ಸಹ ವಂಡರ್. ಓದುಗರಾದ ನಾವು ರೆಡಿಯಾದ 'ಬೈಟು ಕಾಫಿ' ಕುಡಿದು (ಓದಿ) ಸ್ಫೂರ್ತಿ ಪಡೆಯುತ್ತೇವೆ! ಆದರೆ ಆ ಕಾಫಿ ರೆಡಿಯಾಗಲು ಹಿಂದಿರುವ ಕಾಣದ ಕೈಗಳ ಶ್ರಮ ಬಳಗದವರೆಲ್ಲರ ಸಹಕಾರಕ್ಕೆ ಹ್ಯಾಟ್ಸ್ಆಫ್ ಹೇಳಲೇಬೇಕು. ಬೈಟು ಕಾಫಿಗೆ ಈಗ ಒಂದು ವರ್ಷದ ಹೆಮ್ಮೆ. ಈ ನಿಟ್ಟಿನಲ್ಲಿ 'ಬೈಟು ಕಾಫಿ' ಮತ್ತಷ್ಟು ಬದಲಾಗಲಿ, ಪ್ರಚಲಿತ,ಸ ವಿಚಾರಪೂರ್ಣ, ಮಾಹಿತಿಗೆ ಲೇಖನಗಳು ಬರಲಿ. ಮೊದಲ ವರ್ಷದ 20.08.2013ರ ಸಂಚಿಕೆ ಹೃದಯಂಗಮವಾಗಿತ್ತು.
= ಕಾಳೀಹುಂಡಿ ಶಿವಕುಮಾರ್, ಮೈಸೂರು
ಬಿಸಿಬಿಸಿ ಕಾಫಿ ನಾವೆಲ್ಲ ಹ್ಯಾಪಿ
ಬಿಸಿಬಿಸಿ ಕಾಫಿ ಅಡಿಗೆ ಮನೆಯಲ್ಲಿ
ಬೈ ಟು ಕಾಫಿ ಕನ್ನಡಪ್ರಭದಲ್ಲಿ
ವರುಷ ಒಂದಾಯಿತು ಬೈಟು ಕಾಫಿಗೆ
ಹೊಸ ಸ್ವಾದ, ಹೊಸ ರುಚಿ ಓದುಗರಿಗೆ
ಬೈಟು ಕಾಫಿಯಿಂದ ನಾನಂತೂ ಹ್ಯಾಪಿ
ನೀವೂ ಕುಡಿಯಿರಿ ಒಂದು ಫುಲ್ ಕಾಫಿ.
= ಶಿವನಾಪುರ ನರಸಿಂಹಮೂರ್ತಿ, ಕೆಂಗೇರಿ.
ಫುಲ್ ಶುಭಾಶಯ ವಾಹ್!
ಬೈಟು ಕಾಫಿಗೆ ಆಗಲೇ ವರ್ಷ
ನಮಗಂತೂ ವಿಫುಲ ಹರ್ಷ
ಚುಮುಚುಮು ಚಳಿಯಲಿ
ಸ್ಟ್ರಾಂಗ್ ಕಾಫಿಯಷ್ಟೇ ಸ್ವಾದಿಷ್ಟ
ಮಾಹಿತಿ- ಮನರಂಜನೆ
ಮುಷ್ಠಿಯೊಳಗೆ
ಸಮಷ್ಟಿ ನಿರಂತರ
ವಿಭಿನ್ನ ತಾಜಾತನ
ಸಾಗಲಿ ವೈವಿದ್ಯಮಯ ಯಾನ
'ಬೈಟು ಕಾಫಿಗೆ ಫುಲ್ ಶುಭಾಶಯ'
= ತಾರಾ ಸತ್ಯನಾರಾಯಣ,
ಮೈಸೂರು
ಮಾಹಿತಿ ಕಣಜ
ಬೈಟು ಕಾಫಿಯ ಮೊದಲ ವರ್ಷದ ಯಶಸ್ವಿ ಪಯಣಕ್ಕೆ ಆಲ್ ದಿ ಬೆಸ್ಟ್. 'ಬೈಟು ಕಾಫಿ'ಯು ನನ್ನ ಅಚ್ಚುಮೆಚ್ಚಿನ ಪುರವಣಿಯಾಗಿದೆ. ಬೈಟು ಕಾಫಿಯ 2ನೇ ಪುಟದಲ್ಲಿ ಪ್ರಮುಖ ವ್ಯಕ್ತಿಗಳ ಜನುಮದಿನ, ಲೆಕ್ಕರಾಜರಾಣಿ, ಮಾಹಿತಿ ಕಾಲಂ ಹಾಗೂ ದಿನಚರಿ ತುಂಬಾ ಚೆನ್ನಾಗಿ ಮೂಡಿಬರುತ್ತಿವೆ. ಅದರಲ್ಲೂ ಮಹಿಳೆಯರು ತಿಳಿದುಕೊಳ್ಳುವಂತೆ ವಿಷಯಗಳು ತುಂಬ ಚೆನ್ನಾಗಿ ಪ್ರಕಟವಾಗುತ್ತಿವೆ. ಆರೋಗ್ಯ ಸಂಬಂಧಿತ ವಿಚಾರಗಳ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಳನ್ನು ನೀಡಿ. ಬೈಟು ಕಾಫಿಯ ಮಾಸ್ಟ್ಹೆಡ್ ಬದಲಾವಣೆ ಮಾಡಿದ್ದೀರಿ. ಮೊದಲು ಇದ್ದದ್ದೇ ಚೆನ್ನಾಗಿತ್ತು ಅನಿಸುತ್ತೆ.
ಆಲ್ ದಿ ಬೆಸ್ಟ್ ಟು 'ಬೈ ಟು ಕಾಫಿ'
= ಶಕುಂತಲಾ ಡಿ., ಹೊನ್ನಾಳಿ
ನಿಮ್ಮ ಅಚ್ಚುಮೆಚ್ಚಿನ 'ಬೈಟು ಕಾಫಿ'ಗೆ ವರ್ಷ ತುಂಬಿದ ಸಂದರ್ಭದಲ್ಲಿ ಭಾವನೆಗಳನ್ನು ಹಂಚಿಕೊಳ್ಳುವಂತೆ ಓದುಗ ಬಂಧುಗಳಲ್ಲಿ ಮನವಿ ಮಾಡಿದ್ದೆವು.
ಅವರಿಂದ ಶುಭಾಶಯ, ಅಭಿಪ್ರಾಯಗಳ ಮಹಾಪೂರವೇ ಹರಿದು ಬಂದಿದೆ. ಆಯ್ದ ಓಲೆಗಳನ್ನು ಇಲ್ಲಿ ಪ್ರಕಟಿಸಲಾಗುವುದು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: ಛಟಿಜ್ಞಛಛಿಣ2ಅ್ಜಟಛ್ಝಟ.್ಛ್ಟಟ