ಇದು ಅನುಚಿತ, ಅಕ್ರಮ
ಯವ್ವನದಲ್ಲಿ ದೇಹದಲ್ಲಿ ಕಾಮದ ಕಾವು ಇರುವುದು ಸಹಜ. ಆಗ ಅದನ್ನು ತಣಿಸಿಕೊಳ್ಳಲು ಬೇಕಾದ ದೇಹಸಾಮರ್ಥ್ಯವೂ, ಚತುರತೆಯೂ, ಆರ್ಥಿಕ ಸಾಮರ್ಥ್ಯವೂ ಇರುತ್ತದೆ. ಆದರೆ ದೇಹದಿಂದ ಯವ್ವನ ಕಾಲು ಕಿತ್ತ ಮೇಲೂ ಕಾಮಾಸಕ್ತಿ ಉಳಿದೇ ಉಳಿಯುತ್ತದೆ! ಅದನ್ನು ಪೂರೈಸಲು ಬೇಕಾದ್ದೇನೂ ಬಳಿಯಲ್ಲಿ ಇರುವುದಿಲ್ಲ. ಬ್ರಹ್ಮ ಹೀಗ್ಯಾಕೆ ಮಾಡಿದ? ಇದು ಅನುಚಿತ ಅಲ್ಲವೆ?
ಊರ ಮುಂದಿನ ಬಾವಿಕಟ್ಟೆಯ ಬಳಿಯಲ್ಲಿ ವಯೋವೃದ್ಧನೊಬ್ಬ ಕುಳಿತಿದ್ದಾನೆ. ಆತನಿಗೆ ಅಲ್ಲಿ ನೀರು ತುಂಬಿಕೊಳ್ಳುತ್ತಾ ಹೋಗುವ ನಾರಿಯರನ್ನು ನೋಡುವುದೇ ಕೆಲಸ. ನೋಡಿ ಏನು ಮಾಡುತ್ತಾನೆ? ಏನೂ ಮಾಡುವುದಿಲ್ಲ. ತನ್ನ ಯವ್ವನದ ದಿನಗಳನ್ನು ನೆನೆದು ತಲೆ ಚಚ್ಚಿಕೊಳ್ಳುತ್ತಾನೆ ಅಷ್ಟೆ.
ಇದಮನುಚಿತಮಕ್ರಮಶ್ಚಪುಂಸಾಂ
ಯದಿಹ ಜರಾಸ್ವಪಿ ಮಾನ್ಮಥಾ ವಿಕಾರಾಃ
ತದಪಿ ಚ ನ ಕೃತಂ ನಿತಂಬಿನೀನಾಂ
ಸ್ತನಪತನಾವಧಿ ಜೀವಿತಂ ರತಂ ವಾ
ಮುಪ್ಪು ಅಡಸಿದರೂ ಪುರುಷರ ದೇಹದಲ್ಲಿ ಕಾಮವನ್ನು ಹಾಗೇ ಉಳಿಸಿರುತ್ತಾನೆ ಬ್ರಹ್ಮ. ಹಾಗೇ ಸ್ತ್ರೀಯರಲ್ಲಿ ಯವ್ವನ ಜಾರಿ ನಿತಂಬಗಳು ಸುಕ್ಕು ಬಿದ್ದು ಸ್ತನಗಳು ಜೋಲು ಬಿದ್ದರೂ ರತಿ ಆಸಕ್ತಿ ಹಾಗೇ ಇರುತ್ತದೆ. ಇದು ಅನುಚಿತ, ಅಕ್ರಮ. ವೃದ್ಧಾವಸ್ಥೆ ಮತ್ತು ಕಾಮಾಸಕ್ತಿ- ಎರಡರಲ್ಲಿ ಒಂದಿದ್ದರೆ ಸಾಕಿತ್ತು.
ಇಲ್ಲಿ ಕವಿ ಎರಡು ಸೂಚನೆಗಳನ್ನು ಕೊಡುತ್ತಿರುವಂತಿದೆ. ಒಂದು- ಯವ್ವನ ಜಾರಿಹೋಗುವ ಮುನ್ನವೇ ನಿಮ್ಮ ನಿಮ್ಮ ಕಾಮಾಸಕ್ತಿಗಳನ್ನು ತಣಿಸಿಕೊಳ್ಳಿ. ಎರಡು- ವೃದ್ಧಾಪ್ಯ ಬಂದ ಮೇಲೆ ಯವ್ವನಕ್ಕೆ ಹಿಂದಿರುಗುವ ಪ್ರಯತ್ನ ಬೇಡ. ಕವಿ ಹಳೆಯ ಕಾಲದವನು. ಆತನಿಗೆ ವಯಾಗ್ರದ ಪರಿಚಯವಿಲ್ಲ, ಪಾಪ!
- ಹರಿಹರ