ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ವೇದಾಂತ ಧವಳಗಿರಿಗಳ ಸಂಗಮ!

Vishwanath S
Updated On : 2 Dec 2013, 12:20 pm

ಸ್ವಾಮಿ ವಿವೇಕಾನಂದು ಲಂಡನ್‌ನಲ್ಲಿ ಪ್ರೊ. ಮ್ಯಾಕ್ಸ್‌ಮುಲ್ಲರ್‌ರನ್ನು ಭೇಟಿಯಾದುದು ಚರಿತ್ರೆಯಲ್ಲಿ ಒಂದು ಅವಿಸ್ಮರಣೀಯ ಘಟನೆಯಾಗಿದೆ. ಆಕ್ಸ್‌ಫರ್ಡ್ ವಿವಿಯ ಪ್ರಖ್ಯಾತ ಪೌರ್ವಾತ್ಯಶಾಸ್ತ್ರ ವಿಶಾರದರಾದ ಮ್ಯಾಕ್ಸ್‌ಮುಲ್ಲರ್‌ರು ಎಲ್ಲ ಭಾರತೀಯ ಶಾಸ್ತ್ರಗಳ ಬಗ್ಗೆ ಸಂಶೋಧನೆ ನಡೆಸಿ ಬರೆದ 'ದಿ ಸೆಕ್ರೆಡ್ ಬುಕ್ಸ್ ಆಫ್ ದಿ ಈಸ್ಟ್‌' ಎಂಬ ಮಹಾಗ್ರಂಥ 51 ಸಂಪುಟಗಳಲ್ಲಿ ಚಿರಸ್ಥಾಯಿಯಾಗಿದೆ. ಸ್ವಾಮೀಜಿ ಭೇಟಿಯಾದಾಗ ಮುಲ್ಲರ್‌ಗೆ 73 ವರ್ಷ ವಯಸ್ಸಾಗಿತ್ತು. ಸ್ವಾಮೀಜಿಗೆ ಮುಲ್ಲರ್ ಆಧುನಿಕ ಋಷಿಯಂತೆ ಕಂಡರು. ಅವರು ಶ್ರೀರಾಮಕೃಷ್ಣ ಪರಮಹಂಸರ ಭಕ್ತರೂ ಹೌದು.
'ಯಾರು ಶ್ರೀರಾಮಕೃಷ್ಣರನ್ನು ಪ್ರೀತಿಸುತ್ತಾರೋ, ಅವರ ಜಾತಿ ಯಾವುದೇ ಇರಲ್, ರಾಷ್ಟ್ರ ಯಾವುದೇ ಇರಲಿ, ಆ ವ್ಯಕ್ತಿ ಇರುವಲ್ಲಿಗೆ ಹೋಗುವುದನ್ನು ನಾನು ತೀರ್ಥಯಾತ್ರೆಯೆಂದು ಪರಿಗಣಿಸುತ್ತೇನೆ' ಎಂದು ಸ್ವಾಮೀಜಿ ಹೇಳುತ್ತಿದ್ದರು.
ಮ್ಯಾಕ್ಸ್‌ಮುಲ್ಲರ್ ವೇದಾಂತಿಗಳಲ್ಲಿ ವೇದಾಂತಿಗಳು. ಸುಮಾರು 60 ವರ್ಷಗಳ ಕಾಲ ಭಾರತೀಯ ವಿಚಾರಧಾರೆಯ ಜಗತ್ತಿನಲ್ಲಿ ವಿಹರಿಸಿದವರು. ಅವರು ಪರಮಹಂಸರ ಜೀವನ ಸಂದೇಶಗಳ ಶ್ರದ್ಧಾವಂತ ವಿದ್ಯಾರ್ಥಿಯಾಗಿದ್ದರು. ಪರಮಹಂಸರನ್ನು ಕುರಿತು 'ನಿಜ ಮಹಾತ್ಮ' ಎಂಬ ಲೇಖನವನ್ನು 'ನೈಂಟೀನ್ ಸೆಂಚುರಿ' ಮಾಸ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಗುರುವಿನ ಬಗ್ಗೆ ವಿವರಪೂರ್ಣವಾದ 'ಶ್ರೀ ರಾಮಕೃಷ್ಣ: ಹೀಸ್ ಲೈಫ್ ಆ್ಯಂಡ್ ಟೀಚಿಂಗ್ಸ್‌' ಎಂಬ ಗ್ರಂಥವೊಂದನ್ನು ರಚಿಸಿದರು.
ಸ್ವಾಮೀಜಿಗೆ ಮುಲ್ಲರರು ಆಕ್ಸ್‌ಫರ್ಡ್‌ನ ಕಾಲೇಜು, ಗ್ರಂಥಾಲಯಗಳನ್ನು ತೋರಿಸಿ ರೈಲು ನಿಲ್ದಾಣದವರೆಗೂ ಬಂದು ಬೀಳ್ಕೊಟ್ಟರು. ಸ್ವಾಮೀಜಿ 'ವೃದ್ಧರಾದ ನಿಮಗೆ ತೊಂದರೆ ಯಾಕೆ?' ಎಂದಾಗ, ಮುಲ್ಲರ್ ಕೊಟ್ಟ ಕಾರಣ 'ಶ್ರೀರಾಮಕೃಷ್ಣರ ಶಿಷ್ಯರೊಬ್ಬರನ್ನು ಪ್ರತಿದಿನವೂ ನೋಡಲು ಸಾಧ್ಯವಿಲ್ಲವಲ್ಲ!'

- ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement