ಸುರಕ್ಷತೆ ನೇಪಥ್ಯಕ್ಕೆ!
ಕಾರ್ಪೊರೇಟ್ ಮಾದರಿ ಆಡಳಿತ ವ್ಯವಸ್ಥೆಯ ಆಧಾರದ ಮೇಲೆ ನೂರಾರು ಬಸ್ಸುಗಳನ್ನು ಓಡಿಸುವ ಕೆಲವು ಕಂಪನಿಗಳ ಬಸ್ಸುಗಳಲ್ಲಿ ಪ್ರಯಾಣ ಸುರಕ್ಷಿತ. ಆದರೆ, ಇದೇ ಅಭಿಪ್ರಾಯವನ್ನು ಉಳಿದ ಬಸ್ಸುಗಳ ಬಗೆಗೆ ಹೇಳುವಾಗ ಅಸಾಧ್ಯ. ಈ ಬಸ್ಸುಗಳಲ್ಲಿ ವೇಗ, ಗಳಿಕೆ ಮತ್ತು ವ್ಯವಹಾರ ಮೊದಲ ಪುಟದಲ್ಲಿದ್ದರೆ, ಪ್ರಯಾಣಿಕರ ಸುರಕ್ಷತೆ ಕೊನೆಯ ಪುಟದಲ್ಲಿ.
ಒಮ್ಮೆ ಸುವರ್ಣ ಪಥ ರಸ್ತೆಯಾಗುವ ಮೊದಲು ಮುಂಬೈಯಿಂದ ಬೆಂಗಳೂರಿಗೆ ಒಂದು ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. ಚಾಲಕ ಬಸ್ಸನ್ನು ವಿಮಾನದಂತೆ ಓಡಿಸುತ್ತಿದ್ದ. ಬೆದರಿದ ವೃದ್ಧ ದಂಪತಿಗಳೊಬ್ಬರು ಬಸ್ಸನ್ನು ನಿಲ್ಲಿಸಲು ಹೇಳಿ, ಚಾಲಕನಿಗೆ ಕೈಮುಗಿದು 'ಪ್ರಯಾಣಿಕರ ಮೇಲೆ ದ್ವೇಷವಿದ್ದರೆ ಎಲ್ಲರನ್ನೂ ಇಳಿಸಿ ಸಾಲಾಗಿ ನಿಲ್ಲಿಸಿ ಗುಂಡಿಟ್ಟು ಕೊಲ್ಲು. ಈ ರೀತಿ ಬಸ್ಸನ್ನು ಓಡಿಸಿ ಅಪಘಾತ ಮಾಡಿ ಜೀವನ ಪರ್ಯಂತ ಇನ್ನೊಬ್ಬರ ಆಸರೆಯಲ್ಲಿ ಬದುಕುವಂತೆ ಮಾಡಬೇಡ'. ಎನ್ನಲು ನಂತರ ಚಾಲಕ ಬಸ್ಸಿನ ವೇಗ ಕಡಿಮೆ ಮಾಡಿದ್ದ. ಆದರೂ ಮುಂಬೈ- ಬೆಂಗಳೂರು ಅಂತರವನ್ನು ಆತ ಕಡಿಮೆ ತಾಸಿನಲ್ಲೇ ಕ್ರಮಿಸಿದ್ದ!
- ರಮಾನಂದ ಶರ್ಮಾ, ಬೆಂಗಳೂರು
ಖಾಸಗಿ ಬಸ್ ಪ್ರಯಾಣ ಸುರಕ್ಷಿತ!
ಖಾಸಗಿ ಪ್ರಯಾಣ ಸೂಕ್ತ. ಹಲವಾರು ವರ್ಷಗಳಿಂದ ಖಾಸಗಿ ಸಂಸ್ಥೆಗಳು ತನ್ನದೆಯಾದ ಸೇವೆ ಸಲ್ಲಿಸುತ್ತಿವೆ. ಯಾವುದೋ ಒಂದು ಅಪಘಾತದಿಂದ ಸರಿ ಇಲ್ಲಾ ಎನ್ನುವುದು ಎಷ್ಟು ಸರಿ. ಕೆಲವು ಸಂಸ್ಥೆಗಳು ಸರಕಾರಿ ಬಸ್‌ಗಳಿಗಿಂತ ಸರಿಯಾದ ವ್ಯವಸ್ಥೆ ಹೊಂದಿರುತ್ತವೆ. ಸಮಯಕ್ಕೆ ಸರಿಯಾಗಿ ಪ್ರಯಾಣಿಕರನ್ನು ತಲುಪಿಸುತ್ತವೆ ಮತ್ತು ದಾರಿಯಲ್ಲಿ ಬಸ್‌ಗಳು ಕೈ ಕೊಟ್ಟರೆ ಇನ್ನೊಂದು ವ್ಯವಸ್ಥೆಯನ್ನು ಕೂಡಲೇ ಮಾಡಿಕೊಡುತ್ತವೆ. ಸರಕಾರಿ ಬಸ್‌ಗಳಿಗಿಂತ ಜಾಸ್ತಿ ಬಸ್‌ಗಳಿವೆ. ಸರಕಾರಿ ಬಸ್‌ಗಳಲ್ಲಿ ಕೂಡಾ ಅಪಘಾತಗಳು ಸಾಕಷ್ಟು ಕಾಣಬಹುದು.ಪಾಶ್ಚಾತ್ಯ ದೇಶಗಳಲ್ಲಿಯು ಕೂಡ ಖಾಸಗಿ ಸಾರಿಗೆ ವ್ಯವಸ್ಥೆ ಇದೆ. ನಮ್ಮಲ್ಲೂ ಸಾಕಷ್ಟು ಖಾಸಗಿ ಸಾರಿಗೆ ಸಂಸ್ಥೆಗಳು ಉತ್ಕೃಷ್ಟ ಸೇವೆ ನೀಡುತ್ತಿವೆ. ನಿಗಧಿತ ಸ್ಥಳಗಳಲ್ಲಿ ಮಾತ್ರ ನಿಲುಗಡೆ ವ್ಯವಸ್ಥೆ ಇರುತ್ತದೆಯಲ್ಲದೆ, ನಿರ್ದಿಷ್ಟ ಸಮಯಕ್ಕೆ ಸಮಯಕ್ಕೆ ನಮ್ಮ ಸ್ಥಳಗಳಿಗೆ ತಲುಪಬಹುದು. ಇತ್ತೀಚೆ ಸರ್ಕಾರಿ ಬಸಗಳೂ ಅಪಘಾತಕ್ಕೀಡಾಗಿದ್ದು, ಹಲವು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಹೀಗಾಗಿ ಅಪಘಾತಗಳಿಂದಷ್ಟೇ ಸೇವೆಯನ್ನು ಅಳೆಯಲು ಸಾಧ್ಯವಿಲ್ಲ. ಅವರವರ ಅನುಕೂಲಕ್ಕೆ ಬಿಟ್ಟದ್ದು.
- ರೂಪಾ ಗಣಪತರಾವ, ಬನಶೆಟ್ಟಿ