ರವೀಂದ್ರ ಕಲಾಕ್ಷೇತ್ರ: ನಾಟಕೋತ್ಸವ
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರಕ್ಕೆ ಸುವರ್ಣ ಸಂಭ್ರಮ. ಈ ಹಿನ್ನೆಲೆಯಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ.
ಡಿ.3ರಂದು ಅದಮ್ಯ ರಂಗ ಸಂಸ್ಕೃತಿ ತಂಡದಿಂದ 'ಗಿರಿಜಾ ಕಲ್ಯಾಣ' ನಾಟಕ. ರಚನೆ-ಬಿ.ಸುರೇಶ, ನಿರ್ದೇಶನ - ಮಾಲತೇಶ ಬಡಿಗೇರ.
ಡಿ.4ರಂದು ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ಕೃಷ್ಣಾಪುರದೊಡ್ಡಿ ತಂಡದಿಂದ 'ಉರುಗವ್ವ' ನಾಟಕ, ರಚನೆ-ಡಾ. ಬೆಸಗರಹಳ್ಳಿ ರಾಮಣ್ಣ, ಅನುವಾದ-ಡಾ.ಎಂ. ಬೈರೇಗೌಡ, ನಿರ್ದೇಶನ-ಅಭಿಮನ್ಯು ಭೂಪತಿ.
ಡಿ.5ರಂದು ಬೆಂಗಳೂರಿನ ಸಮುದಾಯ ತಂಡದಿಂದ 'ತುಘಲಕ್' ನಾಟಕ. ರಚನೆ-ಡಾ.ಗಿರೀಶ್ ಕಾರ್ನಾಡ, ನಿರ್ದೇಶನ-ಡಾ. ಸ್ಯಾಮ್ಕುಟ್ಟಿ ಪಟ್ಟಂಕರಿ.
ಸ್ಥಳ: ರವೀಂದ್ರ ಕಲಾಕ್ಷೇತ್ರ, ಬೆಂಗಳೂರು. ಸಮಯ: ಪ್ರತಿದಿನ ಸಂಜೆ 7 ಗಂಟೆಗೆ.