ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ತುಡುಗಿನ ಬೆಡಗಿ

Lingaraj Badiger
Updated On : 4 Dec 2013, 6:11 am

ಅವಳಿಗೋ ಒಂದೆಡೆ ಇನಿಯನ ಸೇರುವ ತವಕ, ಇನ್ನೊಂದೆಡೆ ಯಾರಾದರೂ ತನ್ನ ನೋಡಿಯಾರೆಂಬ ಆತಂಕ. ಕವಿದ ಕತ್ತಲೆಯಲ್ಲಿ ಮೇಲುದದಡಿಯಲ್ಲಿ ತಲೆಯ ಮರೆಸಿಕೊಂಡು ಓಡೋಡಿ ಬಂದು ಒಳ ಸೇರಿಕೊಂಡಿದ್ದಾಳೆ. ಆದರೂ ಭಯ ನಿವಾರಣೆಯಾಗಿಲ್ಲ. ಒಳಗೊಳಗೇ ಕಂಪಿಸುತ್ತಿದ್ದಾಳೆ. ಮೈಯೆಲ್ಲಾ ಬೆವತು ಹೋಗಿದೆ. ನಿಂತಲ್ಲಿ ನಿಲಲಾಗದ ಚಡಪಡಿಕೆ ತರಳೆಯದ್ದು. ಕೈ ಹಿಡಿದು, ಬರಸೆಳೆದು ಅಪ್ಪಿಕೊಳ್ಳಲು ತವಕಿಸುತ್ತಿರುವ ಪ್ರಿಯಕರನಿಗೆ ಅವಳ ತುಂಬಿದೆದೆಯ ಏರಿಳಿತಗಳು ಸ್ಪಷ್ಟವಾಗುತ್ತಿದೆ. ಪಿಸುಮಾತಿನಲಿ ಪ್ರಶ್ನೆಗಳೊಂದಿಗೆ ಮುತ್ತಿನ ಸುರಿಮಳೆಗೆ ಮುಂದಾದರೂ, ಆಕೆಯ ಅದರಗಳು ನಡುಗುತ್ತಿರುವುದರಿಂದ ಲಯ ತಪ್ಪುತ್ತಿವೆ. ಇಂಥ ಸನ್ನಿವೇಶದಲ್ಲಿ ಬೆದರಿದ ಹರಿಣಿಯನ್ನು ಕಂಡು ಅವನು ಇನ್ನಷ್ಟು ಉದ್ರೇಕಿತನಾಗುತ್ತಾನೆ. ಆಕೆಯ ಓಲೈಕೆಗೆ ಮುಂದಾಗುವ ಪರಿಯನ್ನು ಕವಿ ಬಣ್ಣಿಸುವುದ ನೋಡಿ.

ಆಯಾತಾಸಿ ವಿಮುಂಚ ವೇಮಥುಭರಂ
ದೃಷ್ಟಾಸಿ ನೋ ಕೇನಚಿತ್
ನೀಲಂ ಚೋಲಮಮುಂ ವಿಮುಂಚ ಹರತು
ಸ್ವೇದಂ ನಿಶಿಥಾಲಃ
ಇತ್ಯಂತರ್ಭಯಸನ್ನಕಂಠಮಸಕೃ-
ದ್ಯಾಮೀತಿ ತಲ್ಪಂ ಗತಾ
ಜಲ್ಪಂತೀ ಪರಿರಭ್ಯತೇ ಸುಕೃತಿಭಿಃ
ಸ್ವೈರಂ ನವಸ್ವೈರಿಣೀ


ಬಂದಾಯಿತಲ್ಲ, ಇನ್ನೇಕೆ ಭಯ? ಚೆಲುವೆ ನಡುಗಬೇಡ ನಿನ್ನ ನೋಡಿದವರಾರೂ ಇಲ್ಲ. ಬಿಚ್ಚುಬೇಗ ನಿನ್ನ ಕಪ್ಪು ಕುಪ್ಪುಸವ, ಬೆವತಿದ್ದೀಯಲ್ಲಾ ತುಸು ಆರಲಿ ದೇಹ ತಣ್ಣನಿರುಳಲಿ... ಎಂದೆನ್ನುತ ಬೆದರಿ ದನಿಯಡಗಿ ನಿಂತವಳನ್ನು ಕೇಳಿಗೆಳೆಯುತ್ತಾನೆ. ಒಳಗೊಳಗೇ ಮುಂದಿನದಕ್ಕೆ ಅವಳು ಕಾತರಿಸಿದ್ದರೂ ಸಲ್ಲದ ಭಯ ತೋರ್ಪಡಿಸುತ್ತಾ 'ಬೇಡ, ಬೇಡ. ಹೋಗಲು ಬಿಡು ನನ್ನ' ಎನ್ನುವ ಮೃದು ಮೈಯ, ತುಡುಗು ಮನದ ಬೆಡಗಿಯನ್ನು ಬಿಡದೇ ತಬ್ಬಿ ಮಂಚಕ್ಕೆಳೆದೇ ಬಿಡುತ್ತಾನೆ ರಸಿಕ ಹುಡುಗ. ಕತ್ತಲೆಯಲ್ಲಿ ರಂಗು ರಂಗಿನ ಚಿತ್ತಾರ ಮೂಡಲಾರಂಭಿಸುತ್ತದೆ.

- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments