ಬೆಳ್ಳಿ ಆಭರಣ
ಬೆಟ್ಟಗುಡ್ಡಗಳಿಗೆ ಮುತ್ತಿಕ್ಕುತ್ತಿರೋ ಮಂಜು; ಗಿಡ ಮರಗಳಿಗೆ ಮುತ್ತು ಪೋಣಿಸುತ್ತರೋ ಮಂಜು; ಪ್ರಯಾಣಿಕರ ದಾರಿಗೆ...
ಬೆಟ್ಟಗುಡ್ಡಗಳಿಗೆ ಮುತ್ತಿಕ್ಕುತ್ತಿರೋ ಮಂಜು; ಗಿಡ ಮರಗಳಿಗೆ ಮುತ್ತು ಪೋಣಿಸುತ್ತರೋ ಮಂಜು; ಪ್ರಯಾಣಿಕರ ದಾರಿಗೆ ಮೆತ್ತನೆಯೇ ಹಾಸಿಗೆ ಹಾಸಿರೋ ಮಂಜು... ವಸುಂಧರೆಯ ಈ ಸೊಬಗು ಒಂದು ಬೆಳ್ಳಿ ಕಾವ್ಯ. ಈಗ ತಾನೆ ಚಳಿಗಾಲ ಆರಂಭದ ಕಟ್ಟೆಯಲ್ಲಿದೆ. ವಸುಂಧರೆಯ ಈ ಚೆಲುವಿಗೆ ಇಬ್ಬನಿ ದೃಷ್ಟಿಬೊಟ್ಟು ಇಡುತ್ತಿರುವ ಈ ದೃಶ್ಯಗಳು ಸೋಜಿಗವೇ ಸರಿ.
ಬೆಟ್ಟವನ್ನೇ ನುಂಗಿಬಿಡುವ ಮಂಜಿನ ಸಾಮ್ರಾಜ್ಯ ಬಲು ವಿಸ್ತಾರ. ಸೂರ್ಯನನ್ನು ಕಂಡ ಕೂಡಲೇ ನಾಚಿ ನೀರಾಗುವ ಈ ಬೆಳ್ಳಿ ತೆನೆ, ಮುಂಜಾವಿನ ವಾಕಿಂಗ್ಪ್ರಿಯರಿಗೆ ಹಿತಾನುಭವ ನೀಡುವಂಥದ್ದು. ಲಗುಬಗೆಯಿಂದ ಕೆಲಸಕ್ಕೆ ಹೊರಟಿರುವವರಿಗೆ ಅಡ್ಡಿಯಾಗಿ, ಕ್ಯಾಮೆರಾಗಳಿಗೆ ಲವಲವಿಕೆಯ ಚಿತ್ರಗಳಾಗಿ ಈ ಇಬ್ಬನಿ ನಡೆಸುವ ಚಳಿಗಾಲದ ಅಧಿವೇಶನದ ಮುಂದೆ ಕುಂದಾನಗರಿಯ ರಾಜಕೀಯ ಅಧಿವೇಶನವೂ ಸಪ್ಪೆ.
- ಚಿತ್ರ-ಲೇಖನ: ಮಲ್ಲಿಕಾರ್ಜುನ ದಾನನ್ನವರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.