ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ರವೀಂದ್ರ ಕಲಾಕ್ಷೇತ್ರ: ನಾಟಕೋತ್ಸವ

Lingaraj Badiger
Updated On : 4 Dec 2013, 6:11 am

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರಕ್ಕೆ  ಸುವರ್ಣ ಸಂಭ್ರಮ. ಈ ಹಿನ್ನೆಲೆಯಲ್ಲಿ ನಾಟಕ ಬೆಂಗ್ಳೂರು, ಹವ್ಯಾಸಿರಂಗತಂಡಗಳ ಬಳಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ, ವಾರ್ತಾ ಇಲಾಖೆ ಸಹಕಾರದೊಂದಿಗೆ ಪ್ರತಿದಿನ ಸಂಜೆ 7 ಗಂಟೆಗೆ ನಾಟಕೋತ್ಸವ ಹಮ್ಮಿಕೊಂಡಿದ್ದು, ಡಿ.11ರಂದು ಮುಕ್ತಾಯ ಗೊಳ್ಳಲಿದೆ.
ಡಿ.9ರಂದು ಅಭಿನಯ ತರಂಗ ತಂಡದಿಂದ 'ಗೋರ' ನಾಟಕ. ರಚನೆ-ರವೀಂದ್ರನಾಥ ಠಾಗೂರ್, ಅನುವಾದ-ಪ್ರಕಾಶ್ ಬೆಳವಾಡಿ, ನಿರ್ದೇಶನ-ಪ್ರಕಾಶ್ ಬೆಳವಾಡಿ.
ಡಿ.10ರಂದು ರಂಗ ಪಯಣ ತಂಡದಿಂದ 'ಒಂದಾನೊಂದು ಕಾಲದಲ್ಲಿ' ನಾಟಕ. ರಚನೆ-ಡಾ.ಗಿರೀಶ್ ಕಾರ್ನಾಡ್, ಅನು ವಾದ-ಕೃಷ್ಣ ಬಸಗೂರ್, ರಾಜ ಗುರು ಹೊಸಕೋಟೆ, ನಿರ್ದೇಶನ-ರಾಜಗುರು ಹೊಸಕೋಟೆ.
ಡಿ.11ರಂದು ಪ್ರಸಂಗ ತಂಡದಿಂದ 'ಅನಭಿಜ್ಞ ಶಾಕುಂತಲ' ನಾಟಕ. ರಚನೆ-ಡಾ.ಕೆ.ವೈ. ನಾರಾಯಣಸ್ವಾಮಿ, ನಿರ್ದೇಶನ-ಪ್ರಕಾಶ್ ಪಿ.ಶೆಟ್ಟಿ.
ಸ್ಥಳ: ರವೀಂದ್ರ ಕಲಾಕ್ಷೇತ್ರ, ಬೆಂಗಳೂರು. ಸಮಯ: ಪ್ರತಿದಿನ ಸಂಜೆ 7 ಗಂಟೆಗೆ. ಮಾಹಿತಿಗೆ ದೂ. 9448542411, 94480 69667 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement