ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಅಡ್ಡಾದಿಡ್ಡಿ ದಾಟಬೇಡಿ

Vishwanath S
Updated On : 9 Dec 2013, 12:42 pm

ರಸ್ತೆಯಲ್ಲಿ ಸಾರ್ವಜನಿಕರು ಪಾಲಿಸಬೇಕಾದ ಮಾರ್ಗಗಳ ಬಗ್ಗೆ ಸಂಚಾರ ಪೊಲೀಸರು ಸೂಚನಾ ಫಲಕಗಳನ್ನು ಅಳವಡಿಸಿರುತ್ತಾರೆ. ಕಾಲುದಾರಿ ಯಾವುದು? ರಸ್ತೆ ಎಲ್ಲಿ ವಿಭಜನೆ ಪಡೆದಿದೆ? ದೀಪಗಳ ಸಂಕೇತ, ರಸ್ತೆ ದಾಟಲು ಬಳಸಬೇಕಾದ ಅಡ್ಡಪಟ್ಟಿ ಸೇರಿದಂತೆ ಎಲ್ಲ ಮಾರ್ಗಸೂಚಿಗಳು ಇರುತ್ತವೆ.
ರಸ್ತೆಯಲ್ಲಿ ಹಾಕಲಾದ ಕಪ್ಪು ಮತ್ತು ಬಿಳಿ ಪಟ್ಟಿಗಳ ಗುರುತನ್ನು ಅಡ್ಡಪಟ್ಟಿಕೆ ಅಥವಾ ಪಾದಚಾರಿಗಳು ದಾಟುವ ರಸ್ತೆ ಎನ್ನಲಾಗುತ್ತದೆ. ಈ ಪಟ್ಟೆಗಳು ಇರುವ ಕಡೆ ಪಾದಚಾರಿಗಳು ಕಡ್ಡಾಯವಾಗಿ ಅದರ ಮೇಲೆಯೇ ದಾಟಬೇಕು.
ರಸ್ತೆ ದಾಟುವ ಮುನ್ನ ಸಿಗ್ನಲ್ ನೋಡಿ. ದಾಟುಪಟ್ಟಿ ಮತ್ತು ಸಂಕೇತ ದೀಪಗಳು ಇಲ್ಲದಿದ್ದರೆ ಪಾದಚಾರಿ ಮಾರ್ಗದ ಹಾಸಿನ ಅಂಚಿನಲ್ಲಿ ನಿಂತುಕೊಳ್ಳಿ. ರಸ್ತೆಯ ಎಡ ಮತ್ತು ಬಲಗಡೆ ವಾಹನಗಳನ್ನು ನೋಡಿ. ವಾಹನಗಳು ದೂರದಲ್ಲಿ ಇದ್ದಲ್ಲಿ ಅಥವಾ ರಸ್ತೆಯಲ್ಲಿ ವಾಹನ ವಿರಳವಾಗಿರುವುದನ್ನು ಖಚಿತಪಡಿಸಿಕೊಂಡು ನಂತರ ರಸ್ತೆ ದಾಟಿ.
ವಾಹನಗಳು ಸಂಚರಿಸುತ್ತಿರುವಾಗ, ಹಸಿರು ದೀಪ ಇರುವಾಗ ರಸ್ತೆ ದಾಟಬಾರದು ಹಾಗೂ ಅಡ್ಡಾದಿಡ್ಡಿಯಾಗಿ ರಸ್ತೆ ದಾಟಬಾರದು. ಪಟ್ಟಿಯ ಮೇಲೆಯೇ ರಸ್ತೆ ದಾಟಬೇಕು. ವಾಹನ ದೂರದಲ್ಲಿ ಬರುತ್ತಿದೆ ಎಂದು ಆತುರವಾಗಿ ರಸ್ತೆ ಮಧ್ಯದಲ್ಲಿ ಓಡಿ ರಸ್ತೆ ದಾಟಬಾರದು.
ಸಾಧ್ಯವಾದಷ್ಟು ಕಾಲುದಾರಿ ಬಳಕೆ ಮಾಡಿ. ಒಂದು ವೇಳೆ ಕಾಲುದಾರಿ ಇಲ್ಲದಿದ್ದರೆ ವಾಹನಗಳು ಬರುವ ದಿಕ್ಕಿಗೆ ಎದುರಾಗಿ, ಆ ರಸ್ತೆಯ ಬಲಭಾಗದ ಅಂಚಿನಲ್ಲಿ ನಡೆಯಿರಿ. ಪಾದಚಾರಿ ಮೇಲ್ಸೇತುವೆ ಅಥವಾ ಸುರಂಗ ಮಾರ್ಗಗಳು ಇರುವ ಕಡೆ ರಸ್ತೆ ದಾಟಲು ಅವುಗಳನ್ನೇ ಬಳಸಿ.

(ಮುಂದುವರಿಯುವುದು)

- ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement