ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಜನ ಜನನಿ ಗೋ ಉತ್ಸವ

Vishwanath S
Updated On : 9 Dec 2013, 12:43 pm

ಜನ ಜನನಿ ಗೋ ಉತ್ಸವ ಡಿಸೆಂಬರ್ 15 ರಿಂದ 19 ರವರೆಗೆ ಕುಮಟಾದ ಮಹಾತ್ಮಾ ಗಾಂಧಿ (ಮಣಿಕ ಗ್ರೌಂಡ್) ಮೈದಾನದಲ್ಲಿ ನಡೆಯಲಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ 5 ತಾಲ್ಲೂಕು ಗಳನ್ನೊಳಗೊಂಡ ಈ ಉತ್ಸವದಲ್ಲಿ ಗೋವು, ಸಾವಯವ ಕೃಷಿ, ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರಗೋಷ್ಠಿ, ವಿದ್ಯಾರ್ಥಿ ಸ್ಪರ್ಧೆ, ವಸ್ತು ಪ್ರದರ್ಶನ, ಗೋ ಆಧಾರಿತ ಕೃಷಿ, ಗೋ ಕಥೆ, ಭಜನೆ, 32 ಗೋ ತಳಿಗಳ ಪ್ರದರ್ಶನ, ಉತ್ತಮ ಗೋ ಸೇವಕರಿಗೆ ಮತ್ತು ಸಾವಯವ ಕೃಷಿಕರಿಗೆ ಸನ್ಮಾನ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಮಹಾಸ್ವಾಮೀಜಿಗಳಿಂದ  ಗೋ ಕಥಾ ಕಾರ್ಯಕ್ರಮ ಪ್ರತಿದಿನ ಸಂಜೆ 6 ಕ್ಕೆ ನಡೆಯಲಿದೆ. ಗೌರವಾಧ್ಯಕ್ಷರಾಗಿ ಕಾರವಾರ ಶ್ರೀರಾಮಕೃಷ್ಣಾಶ್ರಮದ  ಭವೇಶಾನಂದ ಸ್ವಾಮೀಜಿ ಹಾಗೂ ಅಧ್ಯಕ್ಷೆಯನ್ನು ಯಾಗಿ ಭಾರತೀಯ ಗೋ ಬ್ಯಾಂಕ್ ಅಧ್ಯಕ್ಷೆ ಭಾರತಿ ಗಂಗಾಧರ ಪಾಟಿಲ್ ವಹಿಸಲಿದ್ದಾರೆ. ಸ್ಥಳ: ಅಮೃತಧಾರಾ ಗೋ ಶಾಲೆ, ಹೊಸಾಡ, ಮೂರೂರು ಅಂಚೆ, ಕುಮಟಾ ತಾಲುಕು, ಉತ್ತರ ಕನ್ನಡ.  ಮಾಹಿತಿಗೆ  ದೂ: 8861047751/ 9448611217.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement