ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಪೆಲಿಕಾನ್ ದೀಪ ಬಳಸಿ!

ಸಿಲಿಕಾನ್ ಸಿಟಿ ಹೊರತುಪಡಿಸಿ ರಾಜ್ಯದ ಬೇರೆ ನಗರಗಳಲ್ಲಿ ರಸ್ತೆ ದಾಟಲು ಸಾರ್ವಜನಿಕರಿಗೆ ಹಾಕಿರುವ ದಾಟುಪಟ್ಟಿ ಮಾತ್ರ ಇರುತ್ತದೆ....

Rashmi Kasaragodu
Updated On : 9 Dec 2013, 6:19 am

ಸಿಲಿಕಾನ್ ಸಿಟಿ ಹೊರತುಪಡಿಸಿ ರಾಜ್ಯದ ಬೇರೆ ನಗರಗಳಲ್ಲಿ ರಸ್ತೆ ದಾಟಲು ಸಾರ್ವಜನಿಕರಿಗೆ ಹಾಕಿರುವ ದಾಟುಪಟ್ಟಿ ಮಾತ್ರ ಇರುತ್ತದೆ. ಕೆಂಪು ದೀಪ ಹೊತ್ತಿದಾಗ ಮಾತ್ರ ಜನ ರಸ್ತೆ ದಾಟಬೇಕು. ಆದರೆ ಸಿಲಿಕಾನ್ ಸಿಟಿಯಲ್ಲಿ ಅವುಗಳ ಜತೆಗೆ ಪೆಲಿಕಾನ್ ಲೈಟ್‌ಗಳನ್ನು ಅಳವಡಿಸಿದ್ದಾರೆ.
ಇಲ್ಲಿ ಪಾದಚಾರಿಗಳು ಸ್ವಯಂ ಸಂಚಾರ ಪೊಲೀಸರಾಗಿ ವಾಹನಗಳನ್ನು ನಿಲ್ಲಿಸಿ ರಸ್ತೆ ದಾಟಬಹುದು. ಕಂಬದಲ್ಲಿ ಅಳವಡಿಸಿರುವ ಪೆಲಿಕಾನ್ ಲೈಟ್‌ನ ಕೆಳಗಿನ ಗುಂಡಿ ಒತ್ತಿದರೆ ಕೆಂಪು ದೀಪ ಬಂದು ಹಸಿರು ದೀಪ ಹೊತ್ತುತ್ತದೆ. ಆಗ ಪಾದಚಾರಿಗಳು ಸುಲಭವಾಗಿ ರಸ್ತೆ ದಾಟಬಹುದು.
ಅಷ್ಟೇ ಅಲ್ಲ, ರಸ್ತೆಯ ಮತ್ತೊಂದು ಬದಿಗೆ ಹೋದ ಮೇಲೆ ಮತ್ತೆ ಗುಂಡಿ ಒತ್ತಿದರೆ ವಾಹನ ಸಂಚರಿಸಲು ಹಸಿರು ದೀಪ ಬರುತ್ತದೆ. ಇಂತಹ ಸಾಕಷ್ಟು ದೀಪಗಳು ನಗರದ ಪ್ರಮುಖ ರಸ್ತೆಗಳಲ್ಲಿ ಕಾಣಸಿಗುತ್ತವೆ. ಆದರೆ, ವಿಪರ್ಯಾಸವೆಂದರೆ ಈ ಪೆಲಿಕಾನ್ ದೀಪದ ಬಗ್ಗೆ ಸಾಕಷ್ಟು ಮಂದಿಗೆ ತಿಳಿದಿಲ್ಲ. ಹಾಗಾಗಿ ವಾಹನಗಳು ಸಂಚರಿಸುತ್ತಿದ್ದರೂ ಅಲ್ಲಿಯೇ ರಸ್ತೆ ದಾಟಲು ಮುಂದಾಗುತ್ತಾರೆ. ಒಂದು ವೇಳೆ ಅಲ್ಲಿ ಪೊಲೀಸ್ ಕಣ್ಣಿಗೆ ಬಿದ್ದರೆ ಬೇರೆ ಮಾರ್ಗ ಬಳಸುತ್ತಾರೆ. ಹೀಗೆ ಸಿಕ್ಕಸಿಕ್ಕಲ್ಲಿ ರಸ್ತೆ ದಾಟುವುದರಿಂದ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತವೆ ಎಂಬುದು ಪೊಲೀಸರ ಆಂಬೋಣ.
ಅಪಘಾತ ತಡೆಗಟ್ಟುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಪೆಲಿಕಾನ್ ದೀಪಗಳ ಬಗ್ಗೆ ಅರಿವು ಮೂಡಿಸಲು ಪೊಲೀಸರು ಮುಂದಾಗಿದ್ದಾರೆ. ಆದರೆ, ಅವು ಎಷ್ಟರಮಟ್ಟಿಗೆ ಬಳಕೆಯಾಗುತ್ತವೆ ಎಂಬುದಕ್ಕೆ ಜನರೇ ಉತ್ತರ ನೀಡಬೇಕು.

(ಮುಂದುವರಿಯುವುದು)

-  ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement