ನಾಚಿಕೆಯ ಮೊದಲ ರಾತ್ರಿ
ಮದುವೆಯ ಮೊದಲ ರಾತ್ರಿಯ ಸೊಗಸೇ ಸೊಗಸು. ಅದರಲ್ಲೂ, ಸುರತ ಸುಖದ ಬಗ್ಗೆ ಅಮಾಯಕಿಯಾದ, ಸುಸಂಸ್ಕಾರವುಳ್ಳ ತರುಣಿಯ ಜತೆ ಭೋಗಿಸುವುದು ಬಹಳ ...
ಮದುವೆಯ ಮೊದಲ ರಾತ್ರಿಯ ಸೊಗಸೇ ಸೊಗಸು. ಅದರಲ್ಲೂ, ಸುರತ ಸುಖದ ಬಗ್ಗೆ ಅಮಾಯಕಿಯಾದ, ಸುಸಂಸ್ಕಾರವುಳ್ಳ ತರುಣಿಯ ಜತೆ ಭೋಗಿಸುವುದು ಬಹಳ ಹಿತಕರವಾದದ್ದು ಎಂಬುದನ್ನು ಭರ್ತೃಹರಿ, ನೂರಾರು ವರ್ಷಗಳ ಹಿಂದೆಯೇ ಹೇಳಿದ್ದಾನೆ.
ಪ್ರಾಜ್ಞ್ಮಾಮೇತಿ ಮನಾಗನಾಗತರಸಂ ಜಾತಾಭಿಲಾಷಂ ತತಃ
ಸವ್ರೀಡಂ ತದನುಶ್ಲಥೋದ್ಯಮಮಥ ಪ್ರಧ್ವಸಧೈರ್ಯಂ ಪುನಃ
ಪ್ರೇಮಾರ್ದ್ರಂ ಸ್ಪೃಹಣಾಯನಿರ್ಭರರಹಃ ಕ್ರೀಡಾಪ್ರಗಲ್ಭಂ ತತೋ
ನಿಃಶಂಕಾಂಗವಿಕರ್ಷಣಾಧಿಖಿಕಸುಖಂ ರಮಯ್ಂ ಕುಲಸ್ತ್ರೀ ರತಮ್
ಆಕೆಗೆ ಮಿಲನೋತ್ಸವ ಸುಖದ ಬಗ್ಗೆ ಕೊಂಚವೂ ಅರಿವಿಲ್ಲ. ಆದ್ದರಿಂದಲೇ ಹತ್ತಿರ ಬಂದ ನಲ್ಲನನ್ನು ಆತಂಕದಿಂದ ಬೇಡ ಬೇಡವೆನ್ನುತ್ತ ದೂರ ಸರಿಸುತ್ತಾಳೆ. ಆದರೆ ನಲ್ಲನೋ ರಸಿಕ, ಜಾಣ. ಅವನಿಗೆ ಆಕೆಯನ್ನು ಹೇಗೆ ಒಲಿಸಿಕೊಳ್ಳಬೇಕೆಂದ ಗೊತ್ತು. ಅವನ ಮಧುರ ಮಾತುಗಳಿಗೆ ಮರುಳಾಗುತ್ತಾಳೆ, ಆಸೆ ಮೂಡುತ್ತದೆ. ಆತನ ಅಪ್ಪುಗೆ, ಚುಂಬನಗಳಿಂದ ಆಕೆಗೆ ನಾಚಿಕೆಯಾಗುತ್ತದೆ. ಮೂಡಿದ ಧೈರ್ಯವೂ ಮಾಯವಾಗುತ್ತದೆ. ಆದರೆ ನಲ್ಲ ಬಿಡಲೊಲ್ಲ. ಆತನ ಮುದ್ದಾಟಗಳಿಂದ ನಿಧಾನವಾಗಿ ನಾಚಿಕೆಯ ತೆರೆ ಸರಿಯುತ್ತದೆ. ಆದರೂ ಎದೆಯ ಬಳಿ ಆತನ ಕೈ ಹೋದಾಗ ಆಕೆಯ ಕೈ ತಡೆಯುತ್ತದೆ. ಸೊಂಟದ ಬಳಿ ಹೋದರಂತೂ ಇನ್ನೂ ಗಲಿಬಿಲಿ. ಆದರೆ ಗಂಡನಲ್ಲವೆ ಎಂಬ ಹುಂಬ ಧೈರ್ಯ, ಆಸಕ್ತಿ. ಮರ್ದನಾದಿಗಳಿಂದ, ಕೇಳಿಯ ರಹಸ್ಯವನ್ನು ತಾನೂ ಅರಿಯುವ ಉತ್ಕಟತೆ. ಆಕೆ ಮೈಚಳಿ ಬಿಟ್ಟು ಬೆರೆಯುವ ಗಳಿಗೆಯೇ ಸ್ವರ್ಗಸದೃಶ. ಆದ್ದರಿಂದಲೇ ಕುಲೀನ ವಧುವನ್ನು ಒಲಿಸಿಕೊಂಡು ರತಿಸುಖ ಪಡೆಯುವವನೇ ಭಾಗ್ಯವಂತ.
ಪಾಪ, ಆಧುನಿಕ ವರಪುಂಗವರಿಗೆ ಇಂಥ ಲಜ್ಜಾನ್ವಿತ ವಧುಗಳ ಸಂಗ ಭಾಗ್ಯವಿಲ್ಲ!
- ಹರಿಹರ