ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬಗಲಿನ ಗೆಳೆಯನನ್ನೇ ಮರೆತ್ತಿದ್ದ!

ಅಂದು ರಾಜೇಶನಿಗೆ ಎಲ್.ಐ.ಸಿ ಕಾರ್ಯಾಲಯದಲ್ಲಿ ಸನ್ಮಾನ ಸಮಾರಂಭವಿತ್ತು. ಇಪ್ಪತ್ತೊಂದು ವರ್ಷಗಳ ಕಾಲ ಜೀವ ವಿಮಾ ಪ್ರತಿನಿಧಿಯಾಗಿ ದುಡಿದು....

Rashmi Kasaragodu
Updated On : 10 Dec 2013, 3:13 am

ಅಂದು ರಾಜೇಶನಿಗೆ ಎಲ್.ಐ.ಸಿ ಕಾರ್ಯಾಲಯದಲ್ಲಿ ಸನ್ಮಾನ ಸಮಾರಂಭವಿತ್ತು. ಇಪ್ಪತ್ತೊಂದು ವರ್ಷಗಳ ಕಾಲ ಜೀವ ವಿಮಾ ಪ್ರತಿನಿಧಿಯಾಗಿ ದುಡಿದು, ರಾಜೇಶ ಊರಿನ ಜನತೆಯನ್ನೆಲ್ಲ ವಿಮೆಯ ಸುರಕ್ಷತೆಗೆ ಒಳಪಡಿಸಿ, ಆದರ್ಶ ವಿಮಾ ಪ್ರತಿನಿಧಿಯಾಗಿ, ಸನ್ಮಾನಕ್ಕೆ ಪಾತ್ರನಾಗಿದ್ದ. ಎಲ್.ಐ.ಸಿ.ಯು ಪ್ರತಿನಿಧಿಗೆ ನೀಡುವ ಉನ್ನತ ಗೌರವ ಚೇರ್ಮನ್ ಕ್ಲಬ್ ಸದಸ್ಯತ್ವವನ್ನು ನೀಡಿ ಗೌರವಿಸಿತ್ತು. ರಾಜೇಶನ ಮನಸ್ಸು ಆತನ ಮಿತ್ರ ವಸಂತನನ್ನು ನೆನೆಯುತ್ತಿತ್ತು. ಹೌದು, ಅಷ್ಟೇನೂ ಹೆಚ್ಚಿನ ವಿದ್ಯಾರ್ಹತೆ ಹೊಂದದ ರಾಜೇಶನನ್ನು, ಪ್ರೋತ್ಸಾಹಿಸಿ, ಬೆಂಬಲಿಸಿ, ಜನರನ್ನು ಪರಿಚಯಿಸಿ, ಇಂದಿನ ಸಾಧನೆಗೆ, ಗೌರವಕ್ಕೆ ಕಾರಣನಾದವನು ಅವನ ಗೆಳೆಯ ವಸಂತ.
ಇದಾದ ಹಲವು ದಿನಗಳ ನಂತರ, ಮಿತ್ರ ವಸಂತನ ಮಡದಿ ರಾಜೇಶನಿಗೆ ಫೋನ್ ಮಾಡಿ, ರಸ್ತೆ ಅಪಘಾತದಲ್ಲಿ ವಸಂತ ಮಡಿದಿರುವ ಕಹಿ ಸುದ್ದಿಯನ್ನು ತಿಳಿಸಿದಳು. ರಾಜೇಶ ಖಿನ್ನನಾಗಿದ್ದ. ಹಾಗೆಯೇ ಮಿತ್ರನ ಪತ್ನಿ ಇನ್ನೊಂದು ವಿಷಯ ವಿಚಾರಿಸಿದಳು. 'ಮನೆಯ ಪರಿಸ್ಥಿತಿ ತುಂಬಾ ಕಷ್ಟವಾಗಿದೆ ರಾಜೇಶ, ನಮ್ಮ ಯಜಮಾನರು ಇನ್ಷೂರೆನ್ಸ್ ಬಾಂಡುಗಳನ್ನೇನಾದ್ರೂ, ನಿನಗೆ ಕೊಟ್ಟಿದ್ದಾರಾ?'
ಓಹ್! ರಾಜೇಶ ಕುಸಿದು ಹೋಗುವುದೊಂದು ಬಾಕಿ, ಊರಿನವರಿಗೂ, ಪರಊರಿನವರಿಗೂ, ಪರದೇಶದವರಿಗೂ ವಿಮೆ ಮಾಡಿಸಿದ್ದವ, ಬಗಲಿನ ಗೆಳೆಯನನ್ನು ಮರೆತಿದ್ದ.

- ಕವಿತಾ ಮೇಗೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement