ಭರತನಾಟ್ಯ ರಂಗ ಪ್ರವೇಶ
ನಂಜುಂಡ ಸ್ವಾಮಿ ಹಾಗೂ ನಯನರಾಜ್ ಅವರ ಮಗಳು ಹಾಗೂ ಗುರು ಪುಲಕೇಶಿ ಕಸ್ತೂರಿ ಅವರ ಶಿಷ್ಯೆಯಾಗಿರುವ ಕು. ಚಂದನಾ ಎನ್. ಸ್ವಾಮಿ ಡಿಸೆಂಬರ್ 12ರಂದು ರಂಗ ಪ್ರವೇಶ ಮಾಡಲಿದ್ದಾರೆ.
ಭರತನಾಟ್ಯವನ್ನು 7ನೇ ವಯಸ್ಸಿನಲ್ಲಿ ಪ್ರಾರಂಭಿಸಿದ ಚಂದನಾ, ಮೊದಲಿಗೆ ವಿದ್ವಾನ್ ಪ್ರಸನ್ನ ಕಸ್ತೂರಿ ಅವರಿಂದ ಹೆಜ್ಜೆ ಹಾಕುವುದನ್ನು ಕಲಿತ ಇವರು ನಂತರದಲ್ಲಿ ವಿದ್ವಾನ್ ಪುಲಕೇಶಿ ಕಸ್ತೂರಿ ಅವರಲ್ಲಿ ಕಲಿತು ಪರಿಪಕ್ವವಾಗಿ ಹೊರ ಹೊಮ್ಮಿದ್ದಾರೆ. ಈವರೆಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ಕನ್ನಡ ರಾಜ್ಯೋತ್ಸವ, ಕರೂರ್ ನಾಟ್ಯಾಂಜಲಿ ಕಾರ್ಯಕ್ರಮದಲ್ಲಿ ಅಲ್ಲದೆ ಹಲವು ಕಡೆ ನೃತ್ಯ ಪ್ರದರ್ಶನ ನೀಡಿದ್ದಾರೆ. ಹಾಗೆಯೇ ಶಾಲೆಯಲ್ಲಿ ನೃತ್ಯ ಪ್ರದರ್ಶನ ನೀಡಿ, ಹಲವು ಪ್ರಶಸ್ತಿಗಳನ್ನು ಪಡೆದಿದ್ದಾಳೆ.
ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಭರತ ನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಕ್ಸ್ಫರ್ಡ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್. ನರಸರಾಜು, ರಮೇಶ್ ರಾಜು, ಸೇಂಟ್ ಆನ್ಸ್, ವೆಂಕಟ್, ವೀನಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಟ. ಬಾಲಕೃಷ್ಣ, ಕಿರಿತೆರೆ ನಟ ಜೆ. ಕಾರ್ತಿಕ್ ಭಾಗವಹಿಸಲಿದ್ದಾರೆ.
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಂಗಳೂರು. ಸಮಯ: ಸಂಜೆ 6 ಗೆಂಟೆಗೆ. ದೂರವಾಣಿ: 99450 17591.