ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಹೃದಯ ತುಂಬಿಬಂದ ಹರ್ಷೋದ್ಗಾರ!

Lingaraj Badiger
Updated On : 12 Dec 2013, 12:57 pm

ಧರ್ಮದ ಇತಿಹಾಸದಲ್ಲೇ ಇದೊಂದು ಅಪೂರ್ವ ಘಟನೆ. ಸ್ವಾಮಿ ವಿವೇಕಾನಂದರು ರಾಮನಾಡಿನ ಅರಸ ಭಾಸ್ಕರ ಸೇತುಪತಿಯ ಆಹ್ವಾನದ ಮೇರೆಗೆ ಶ್ರೀಲಂಕಾದ ಜಾಫ್ನಾದಿಂದ ಭಾರತದ ಪಾಂಬನ್ನಿಗೆ ಬಂದರು. ಆಗ ರಾಜ ಸ್ವಾಮೀಜಿಗೆ ಅದ್ಧೂರಿ ಸ್ವಾಗತ ನೀಡಿದ. ಜನರು ಹರ್ಷೋದ್ಗಾರ ಮಾಡಿದರು. ಸಾರೋಟಿನಲ್ಲಿ ಸ್ವಾಮೀಜಿಯನ್ನು ಕೂರಿಸಿ ಮೆರವಣಿಗೆ ಮಾಡಲಾಯಿತು.ನಂತರ ಸ್ವಾಮೀಜಿ ರಾಮೇಶ್ವರದಿಂದ ಮಧುರೆ ಮಾರ್ಗವಾಗಿ ಮದ್ರಾಸಿಗೆ ಹೊರಟರು. ಎಲ್ಲಾ ಕಡೆ ಅವರಿಗೆ ಅದ್ಧೂರಿ ಸ್ವಾಗತ, ಭಾಷಣ ಮಾಡುವಂತೆ ಒತ್ತಾಯ, ಸ್ವಾಮೀಜಿಯನ್ನು ನೋಡಬೇಕು, ಅವರ ಕಂಚಿನ ಕಂಠದಿಂದ ಮಾತುಗಳನ್ನು ಕೇಳಬೇಕು ಎಂದು ಜನ ಕಾತುರರಾಗಿರುತ್ತಿದ್ದರು. ರೈಲಿನಲ್ಲಿ ಮದ್ರಾಸಿಗೆ ಬರುವಾಗ ಕೆಲವೇ ಮೈಲಿ ದೂರದಲ್ಲಿದ್ದ ಪುಟ್ಟ ನಿಲ್ದಾಣದಲ್ಲಿ ಒಂದು ಘಟನೆ ನಡೆಯಿತು.

ಸ್ವಾಮೀಜಿ ಕುಳಿತಿದ್ದ ರೈಲು ಎಕ್ಸ್‌ಪ್ರೆಸ್ ಆದ್ದರಿಂದ ಈ ಪುಟ್ಟ ನಿಲ್ದಾಣದಲ್ಲಿ ನಿಲುಗಡೆ ಇರಲಿಲ್ಲ. ಆದರೂ ಅಲ್ಲಿಯ ಜನರು ಸ್ಟೇಷನ್‌ಮಾಸ್ಟರ್‌ನಿಗೆ ಟ್ರೈನ್ ನಿಲ್ಲಿಸುವಂತೆ ಮಾಡಲು ಪರಿಪರಿಯಾಗಿ ಬೇಡಿಕೊಂಡರು. ಆದರೆ, ಅವನು ನಿರಾಕರಿಸಿದನು. ಅಷ್ಟೊತ್ತಿಗೆ ದೂರದಲ್ಲಿ ಟ್ರೈನ್ ಬರುವುದು ಕಾಣಿಸಿತು. ಜನರಿಗೆ ಏನು ಮಾಡಬೇಕೆಂದು ತಿಳಿಯದೆ ಓಡಿ ಬಂದು ರೈಲು ಹಳಿಗಳ ಮೇಲೆ ಸಾಲಾಗಿ ಮಲಗಿಬಿಟ್ಟರು! ರೈಲು ಹತ್ತಿರ ಬಂದೇ ಬಿಟ್ಟಿತು. ಆದರೆ, ಈ ದೃಶ್ಯವನ್ನು ದೂರದಿಂದಲೇ ನೋಡಿದ ರೈಲಿನೊಳಗಿನ ಗಾರ್ಡ್‌ನ ಸಮಯ ಪ್ರಜ್ಞೆಯಿಂದ ಭೀಕರ ಅನಾಹುತವನ್ನು ತಪ್ಪಿಸಿದ. ಟ್ರೈನ್ ನಿಂತಿತು. ಜನರು ಜಯಘೋಷದ ಸುರಿಮಳೆಗರೆದರು. ಜನರ ಪ್ರೀತಿ, ಭಕ್ತಿಯನ್ನು ಕಂಡು ಸ್ವಾಮೀಜಿಯ ಕಣ್ಣಂಚಿನಲ್ಲಿ ನೀರು ತುಂಬಿತು. ಎಲ್ಲರಿಗೂ ತಮ್ಮ ಹೃತ್ಪೂರ್ವಕ ಕೃತಜ್ಞತೆ ಅರ್ಪಿಸಿದರು.

- ಆನಂದ ಎಸ್.ಎನ್.
anandsn193@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement