ಮನ್ನಾಡೆಗೆ ನೃತ್ಯ ನಮನ
ಬೆಂಗಳೂರಿನ ಸೃಷ್ಟಿ ಪ್ರದರ್ಶಕ ಕಲೆಗಳು ಹಾಗೂ ನೃತ್ಯ ತೆರಪಿ ಕೇಂದ್ರವು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ವಾರ್ತಾ ಇಲಾಖೆ ಹಾಗೂ ಬೆಂಗಾಲಿ ಸಂಘದ ...
ಬೆಂಗಳೂರಿನ ಸೃಷ್ಟಿ ಪ್ರದರ್ಶಕ ಕಲೆಗಳು ಹಾಗೂ ನೃತ್ಯ ತೆರಪಿ ಕೇಂದ್ರವು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ವಾರ್ತಾ ಇಲಾಖೆ ಹಾಗೂ ಬೆಂಗಾಲಿ ಸಂಘದ ಸಹಕಾರದೊಂದಿಗೆ ಡಿಸೆಂಬರ್ 15ರಂದು ಮನ್ನಾಡೆಗೆ ನೃತ್ಯ ನಮನ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಂದು ನಡೆಯುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶ್ರೀಮತಿ ಶುಮಿತಾ ಮನ್ನಾಡೆ, ಕೆನರಾ ಬ್ಯಾಂಕಿನ ಬೆಂಗಳೂರು ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ರವೀಂದ್ರ ಭಂಡಾರಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಬಿ.ಎಸ್. ಸತ್ಯನಾರಾಯಣ, ಗಾನ ವಿದುಷಿ ಶ್ರೀಮತಿ ಶ್ಯಾಮಲಾ ಜಿ. ಭಾವೆ ಭಾಗವಹಿಸಲಿದ್ದಾರೆ.
ನಾಟ್ಯಾಂತರಂಗದ ನಿರ್ದೇಶಕರಾದ ಶುಭಾ ಧನಂಜಯ್, ನೃತ್ಯ ಕಲಾ ಮಂದಿರದ ಅರ್ಚನಾ ಮತ್ತು ಚೇತನ, ಬೆಂಗಳೂರಿನ ಶ್ರೀಮತಿ ರೂಪ ರೋಹಿತ್, ಸಮೀರ್, ಸೃಷ್ಟಿ ಬೆಂಗಳೂರಿನ ಅನುಪಮಾ ಭೂಷಣ್, ಶಾಂತಾ ಮತ್ತು ತಂಡ, ಡಾ. ಎ.ವಿ. ಸತ್ಯನಾರಾಯಣ, ದಿಲ್ಲಿಯ ನಿತಿನ್, ಜಯಪುರದ ಮನಿಷಾ ಅವರಿಂದ ನೃತ್ಯ ಪ್ರದರ್ಶನ ನಡೆಯಲಿದೆ.
ಸ್ಥಳ: ಗಾಯನ ಸಮಾಜ, ಕೆ.ಆರ್. ರಸ್ತೆ, ಬೆಂಗಳೂರು. ಸಮಯ: ಸಂಜೆ- 6.30ಕ್ಕೆ. ಮಾಹಿತಿಗೆ ದೂ: 9845698089