ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕಲೆ ಆಧಾರಿತ ಚಿಕಿತ್ಸೆ

Mainashree
Updated On : 16 Dec 2013, 12:23 pm

ಓದಿನಲ್ಲಿ ಹಿಂದಿರುವ ಮಕ್ಕಳಿಗೆ, ಗ್ರಹಿಸಲು ವಿಳಂಬಿಸುವ ಮಕ್ಕಳು ಹಾಗೂ ಆಟಿಸಂ ಮಕ್ಕಳಿಗಾಗಿ 'ಹವ್ಯಾಸ' ವಿಶಿಷ್ಟ ಹವ್ಯಾಸ ಕ್ಲಬ್, ಕಲೆ ಆಧಾರಿತ ಥೆರಪಿ ಬಗ್ಗೆ ಜನವರಿ 4ರಿಂದ ಮಾರ್ಚ್ 30ರವರೆಗೆ ವಾರಾಂತ್ಯದಲ್ಲಿ  ಕಾರ್ಯಾಗಾರ ಹಮ್ಮಿಕೊಂಡಿದೆ.  5 ರಿಂದ 15 ವರ್ಷದ ಮಕ್ಕಳು ಇದರಲ್ಲಿ ಭಾಗವಹಿಸಬಹುದು. ಪ್ರತಿ ತಂಡದಲ್ಲಿ 13 ಮಕ್ಕಳಿಗೆ ಮಾತ್ರ ಅವಕಾಶವಿರುತ್ತದೆ.
ಕಲೆ ಆಧಾರಿತ ಚಿಕಿತ್ಸೆಯಲ್ಲಿ ಸಂಗೀತ, ಪೈಂಟಿಂಗ್, ಕಥೆ, ಚಲನೆ, ಆಟ ಹೂಗೂ ನಾಟಕಗಳು ಒಳಗೊಂಡಿರುತ್ತದೆ.  ಇವುಗಳೆಲ್ಲವನ್ನು ತಜ್ಞರು ನಡೆಸಿಕೊಡಲಿದ್ದಾರೆ.
ಈ ಚಿಕಿತ್ಸೆಯಿಂದ ಮಕ್ಕಳಲ್ಲಿ ಏಕಾಗ್ರತೆ ಅಭಿವೃದ್ಧಿಗೊಳ್ಳುವುದಲ್ಲದೆ  ಓದುವುದರಲ್ಲೂ ಆಸಕ್ತಿ ಮೂಡಿ ಜ್ಞಾಪಕಶಕ್ತಿ ವೃದ್ಧಿಗೊಳ್ಳುತ್ತದೆ. ಸ್ಥಳ: ಮಹಾಲಕ್ಷ್ಮಿ ಲೇಔಟ್, ಬೆಂಗಳೂರು. ಹೆಚ್ಚಿನ ಮಾಹಿತಿಗೆ ದೂ: 9880035516 ಅಥವಾ 9980016052 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement