ಜಂಬೂಫಲ ಪ್ರಸಂಗ
ಪಾಂಡವರು ವನವಾಸದಲ್ಲಿದ್ದಾರೆ. ಒಮ್ಮೆ ಆಹಾರ ಹುಡುಕುತ್ತಿದ್ದ ಭೀಮಸೇನ, ಕಣ್ವರ ಭುಕ್ತಿಗಾಗಿ ಮೀಸಲಾಗಿದ್ದ ಬೃಹತ್ ಜಂಬೂಫಲವೊಂದನ್ನು ಮರದಿಂದ ಕಿತ್ತುಕೊಂಡು ಬರುತ್ತಾನೆ. ಇದು ಕಣ್ವರಿಗೆ ಗೊತ್ತಾದರೆ ಪಾಂಡವರನ್ನು ಶಪಿಸಿಯಾರು ಎಂದು ಧೌಮ್ಯ ಋಷಿಗಳು ಅವರಲ್ಲಿ ಭೀತಿ ಬಿತ್ತುತ್ತಾರೆ. ಪ್ರಮಾದವನ್ನು ಸರಿಪಡಿಸುವ ಬಗೆಯೆಂತು? ಎಲ್ಲರೂ ಕೃಷ್ಣನ ಮೊರೆ ಹೋಗುತ್ತಾರೆ. ಆತ ಬರುತ್ತಾನೆ. ಪಾಂಡವರು, ದ್ರೌಪದಿ ಸಹಿತ, ತಮ್ಮ ಅಂತರಂಗದ ಮಾತನ್ನು ಆಡಿದರೆ ಫಲ ಮರ ಸೇರಿಕೊಳ್ಳುತ್ತದೆ ಎಂದು ಆತ ಆದೇಶಿಸುತ್ತಾನೆ. ಒಬ್ಬೊಬ್ಬ ಪಾಂಡವನೂ ತಮ್ಮ ಅಂತರಂಗದ ಪ್ರಾಮಾಣಿಕ ನುಡಿಯೊಂದನ್ನು ಆಡುತ್ತಲೇ, ಹಣ್ಣು ತುಸುತುಸುವೇ ಮೇಲೇರುತ್ತದೆ. ಕೊನೆಯ ಪಾಳಿ ದ್ರೌಪದಿಯದು. ಆಕೆ ಹೇಳುತ್ತಾಳೆ:
ಪಂಚಮೇ ಪತಯಸ್ಸಂತಿ ಷಷ್ಠಸ್ತು ಮಮ ರೋಚತೇ
ಪುರುಷಾಣಾ ಮ ಭಾವೇನಾ ಸರ್ವಾ ನಾರ್ಯಾಃ ಪತಿವ್ರತಾಃ
'ನನಗೆ ಶೂರರಾದ ಐವರು ಪತಿಗಳಿದ್ದಾರೆ. ಆದರೆ ಮನಸ್ಸು ಆರನೆಯವನೊಬ್ಬನನ್ನು ಬಯಸುತ್ತದೆ. ತನಗೆ ಅನುರೂಪನಾದ ಪುರುಷ ದೊರೆತರೆ ಎಲ್ಲ ನಾರಿಯರೂ ಪತಿವ್ರತೆಯರೇ ಆಗಿರುತ್ತಾರೆ!' ಹಣ್ಣು ನೇರವಾಗಿ ತೊಟ್ಟು ಸೇರುತ್ತದೆ.
ಈ ಶ್ಲೋಕದ ಬೇರೆ ಬೇರೆ ಪಾಠಾಂತರಗಳು ಲಭ್ಯವಿವೆ. 'ದ್ರೌಪದಿ ಬಯಸಿದ್ದು ಕೃಷ್ಣನನ್ನು, ಅಣ್ಣನಾಗಿ' ಎಂಬ ಪಂಡಿತವಾಕ್ಯವಿದೆ. 'ಹೆಂಗಸರ ಮನಸ್ಸೇ ಹೀಗೆ, ಅದಕ್ಕೆ ದ್ರೌಪದಿ ಸಾಕ್ಷಿ ಒದಗಿಸಿದ್ದಾಳೆ' ಎಂಬ ಕುತರ್ಕಕ್ಕೂ ಈ ಶ್ಲೋಕ ಬಳಕೆಯಾಗಿದೆ. 'ಬಯಸಲಿ ಏನೀಗ?' ಎನ್ನುವ ಸ್ತ್ರೀವಾದಿಗಳೂ ಸಾಕಷ್ಟಿದ್ದಾರೆ. ಈ ಘಟನೆಯೇ ಪ್ರಕ್ಷಿಪ್ತ, ಬೇರೆ ಯಾರೋ ಸೇರಿಸಿದ್ದು ಎನ್ನುವವರೂ ಇದ್ದಾರೆ.
- ಹರಿಹರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.