ಪಟಾಕಿಗಳ ಬಣ್ಣ ಆಕರ್ಷಕವಾಗಿರಲು ಕಾರಣವೇನು?
ಬಾಣಬಿರುಸನ್ನು (ಪಟಾಕಿ ಮುಂತಾದವು) ವಿಶ್ವದ ಎಲ್ಲ ದೇಶಗಳಲ್ಲೂ ಹಬ್ಬ ಹರಿದಿನಗಳಲ್ಲಿ, ರಾಷ್ಟ್ರೀಯ ಉತ್ಸವಗಳಲ್ಲಿ ಮತ್ತು ಸಾಮಾಜಿಕ ಸಮಾರಂಭಗಳಲ್ಲಿ ಬಳಸಲಾಗುತ್ತದೆ.
ಈ ಬಾಣಬಿರುಸು ಉರಿದಾಗ ಬಣ್ಣ ಬಣ್ಣದ ಬೆಳಕು ಚಿತ್ತಾಕರ್ಷಕವಾಗಿ ಮೂಡಿ, ಕಣ್ಣಿಗೆ ಆನಂದ ಉಂಟುಮಾಡುತ್ತದೆ. ಅವು ಏಕೆ ಅಷ್ಟು ವರ್ಣರಂಜಿತವಾಗಿರುತ್ತವೆಂದರೆ, ಸುಡುಮದ್ದನ್ನು ಪೊಟ್ಯಾಶಿಯಂ ನೈಟ್ರೇಟ್, ಸಲ್ಫರ್ ಮತ್ತು ಕಲ್ಲಿದ್ದಲುಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಎರಡು ಲೋಹಗಳಾದ ಸ್ಟ್ರಾಂಟಿಯಂ ಮತ್ತು ಬೇರಿಯಂ ಲವಣಗಳಿಂದ ಬಣ್ಣಗಳು ದೊರೆಯುತ್ತವೆ. ಅವನ್ನು ಪೊಟ್ಯಾಶಿಯಂ ಕ್ಲೋರೈಡ್‌ನ ಜತೆ ಬೆರೆಸಲಾಗುವುದು. ಬೇರಿಯಂ ಲವಣದಿಂದ ಹಸಿರು ಬಣ್ಣ ಮತ್ತು ಸ್ಟ್ರಾಂಟಿಯಂ ಸಲ್ಫೇಟ್‌ನಿಂದ ತೆಳು ಆಕಾಶನೀಲಿ ಬಣ್ಣ ಬರುತ್ತದೆ. ಸ್ಟ್ರಾಂಟಿಯಂ ಕಾರ್ಬೊನೇಟ್ ಹಳದಿ ಬಣ್ಣವನ್ನುಂಟುಮಾಡಿದರೆ, ಸ್ಟ್ರಾಂಟಿಯಂ ನೈಟ್ರೇಟ್ ಕೆಂಪು ಬಣ್ಣ ನೀಡುತ್ತದೆ. ಈ ಎಲ್ಲ ಲವಣಗಳು ಉರಿದಾಗ ವಿವಿಧ ಬಣ್ಣಗಳು ಸುಂದರವಾಗಿ ಮೂಡಿ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತವೆ.
- ಹರಳಹಳ್ಳಿ ಪುಟ್ಟರಾಜು