ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಪ್ರಜ್ವಲಿಸುವ ದೀಪಗಳಿಂದ ಅಪಘಾತ

Lingaraj Badiger
Updated On : 18 Dec 2013, 6:17 am

ರಾತ್ರಿ ವೇಳೆ ದ್ವಿಚಕ್ರ ವಾಹನ/ಕಾರು/ಬಸ್‌ನಲ್ಲಿ ಸಂಚಾರ ಮಾಡುವಾಗ ವಾಹನದ ದೀಪ (ಹೆಡ್‌ಲೈಟ್) ಹಾಕಬೇಕು. ಇಲ್ಲವಾದಲ್ಲಿ ಎದುರಿನಿಂದ ಬರುವ ವಾಹನ ನಮಗೆ ಡಿಕ್ಕಿ ಹೊಡೆಯಬಹುದು. ಅಥವಾ ರಸ್ತೆಯಲ್ಲಿ ಬೀದಿ ದೀಪ ಇಲ್ಲದಿದ್ದರೆ ಸ್ವಯಂ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಆದರೆ, ವಾಹನದಲ್ಲಿ ದೀಪ ಎಷ್ಟು ಮುಖ್ಯವೋ ಅದೇ ರೀತಿ ಅತಿಯಾದ ಪ್ರಜ್ವಲಿಸುವ ದೀಪಗಳಿಂದ ಅಪಘಾತ ಸಾಧ್ಯತೆ ಸಾಕಷ್ಟು ಹೆಚ್ಚಿದೆ.

ಅತಿಯಾಗಿ ಪ್ರಜ್ವಲಿಸುವ ದೀಪಗಳನ್ನು ಹಾಕಿದರೆ ಎದುರಿನಿಂದ ಬರುವ ವಾಹನ ಚಾಲಕರಿಗೆ ದೃಷ್ಟಿ ಮಂಜಾಗಬಹುದು. ಹಾಗೂ ಅದು ಅಪಘಾತಕ್ಕೆ ಎಡೆ ಮಾಡಿಕೊಡಬಹುದು. ಹಾಗಾಗಿ ಕಡಿಮೆ ಪ್ರಭೆ(ಬೆಳಕಿನಲ್ಲಿ) ವಾಹನದ ದೀಪಗಳನ್ನು ಬಳಸಿ, ವಾಹನ ಚಾಲನೆ ಮಾಡಿ.
ಹೆದ್ದಾರಿಯಲ್ಲಿ ವೇಗವಾಗಿ ಸಂಚರಿಸುವ ವೇಳೆ ನಿಮ್ಮ ಸುರಕ್ಷತೆ ದೃಷ್ಟಿಯಿಂದ ನಿಮ್ಮ ವಾಹನದ ದೀಪವನ್ನು ಮಂದಗೊಳಿಸಿ. ಒಂದು ವೇಳೆ ಎದುರು ಬರುವ ವಾಹನದ ಚಾಲಕ ದೀಪವನ್ನು ಮಂದಗೊಳಿಸಿದರೆ ನಿಮ್ಮ ವಾಹನದ ದೀಪ ಮಂದಗೊಳಿಸುವುದು ಬೇಡ. ಇಲ್ಲವಾದಲ್ಲಿ ದೀಪವನ್ನು ಹಾಕುವುದು, ಆರಿಸುವುದು ಮಾಡಿ. ಹೀಗೆ ಮಾಡಿದಲ್ಲಿ ಸಂಚರಿಸಲು ಸಹಾಯವಾಗುತ್ತದೆ.

ರಾತ್ರಿ ವೇಳೆ ವೇಗವಾಗಿ, ಅಡ್ಡಾದಿಡ್ಡಿ ಸಂಚರಿಸುವುದು ಪ್ರಮುಖವಾಗಿ ತಿರುವು ಹಾಗೂ ಕೆರೆಗಳಿರುವ ಪ್ರದೇಶದಲ್ಲಿ ದೀಪ ಹಾಕುವುದು, ಶಬ್ದ ಮಾಡುವುದು ಹಾಗೂ ಜಾಗರೂಕರಾಗಿ ಚಾಲನೆ ಮಾಡುವ ಬಗ್ಗೆ ಚಾಲಕ ಹೆಚ್ಚು ಗಮನ ಹರಿಸಬೇಗಾಕುತ್ತದೆ.

- ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement