ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ವಿಶ್ವದ ಪ್ರಸಿದ್ಧ ರತ್ನಗಂಬಳಿಗಳು

Lingaraj Badiger
Updated On : 18 Dec 2013, 6:18 am

ರತ್ನಗಂಬಳಿಗಳಿಗೆ ಪ್ರಪಂಚದ ಎಲ್ಲ ದೇಶಗಳಲ್ಲೂ ವಿಶೇಷ ಸ್ಥಾನ ಹಾಗೂ ಅದಕ್ಕೊಂದು ಇತಿಹಾಸವೇ ಇದೆ. ರತ್ನಗಂಬಳಿ ಶ್ರೀಮಂತಿಕೆಯ ನೆಲದ ಸೌಂದರ್ಯ ಹೆಚ್ಚಿಸಲು ಪ್ರಾಚೀನ ಕಾಲದಿಂದಲೂ ರತ್ನಗಂಬಳಿಗಳನ್ನು ಬಳಸುತ್ತಾ ಬರಲಾಗಿದೆ. ವಿಶ್ವದ ಅತ್ಯಂತ ಹಳೆಯ ರತ್ನಗಂಬಳಿಯನ್ನು ಈಗಲೂ ಲೆನಿನ್‌ಗ್ರಾಡ್‌ನಲ್ಲಿ ಇಡಲಾಗಿದೆ. ಇದನ್ನು ರಷ್ಯಾದ ಪಾಸ್ಪಿರಿಕ್ ಎಂಬಲ್ಲಿ ಕ್ರಿ.ಪೂ. 300 ವರ್ಷಗಳ ಸುಮಾರಿಗೆ ತಯಾರಿಸಲಾಯಿತು. ಈ ರತ್ನಗಂಬಳಿ ಈಗಲೂ ಹಾಗೆಯೇ ಇದೆ. ಅದರ ಉದ್ದ 2 ಮೀಟರ್‌ಗಳು ಮತ್ತು ಅಗಲ 1.8 ಮೀಟರ್‌ಗಳು.
ವಿಶ್ವದ ಅತ್ಯಂತ ಹಳೆಯ ಮತ್ತು ಅತ್ಯಂತ ಬೆಲೆಬಾಳುವ ರತ್ನಗಂಬಳಿಗಳಲ್ಲಿ ಬಾಗ್ದಾದ್‌ನ ಕಲೀಫಾನಿಗಾಗಿ ಚಿನ್ನ ಮತ್ತು ರೇಷ್ಮೆಯಿಂದ ತಯಾರಿಸಿದ ರತ್ನಗಂಬಳಿಗೆ ಪ್ರಮುಖ ಸ್ಥಾನವಿದೆ. ಈ ರತ್ನಗಂಬಳಿಯನ್ನು ಕ್ರಿ.ಶ. 743ರಲ್ಲಿ ತಯಾರಿಸಲಾಯಿತು. ಅದರ ಉದ್ದ 90 ಮೀಟರ್‌ಗಳು ಹಾಗೂ ಅಗಲ 55 ಮೀಟರ್‌ಗಳಷ್ಟಿತ್ತು. ವಿಶ್ವದ ಅತಿ ದೊಡ್ಡ ರತ್ನಗಂಬಳಿಯನ್ನು ನ್ಯೂಯಾರ್ಕ್‌ನ ಕೊಲಂಬಸ್ ಸರ್ಕಲ್‌ನ ಪ್ರದರ್ಶನ ಮಂದಿರದ ನೆಲಕ್ಕೆ ಹಾಸಲಾಗಿತ್ತು.

- ಹರಳಹಳ್ಳಿ ಪುಟ್ಟರಾಜು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement